ಪ್ರಗತಿ ವಾಹಿನಿ ಬೆಳಗಾವಿ: ಕಾರ್ನ್ ಎಂಬುದು ಎಲ್ಲರೂ ಮೆಚ್ಚುವ ಜನಪ್ರಿಯ ತಿನಿಸು. ಸಿನೇಮಾ ಮಂದಿರಗಳಲ್ಲಿ ಮೆಲ್ಲುವ ಪಾಪ್ ಕಾರ್ನ್ ಗಳಿಂದ ಹಿಡಿದು ರಸ್ತೆ ಬದಿಯ ಅಂಗಡಿಗಳಲ್ಲಿ ಸಿಗುವ ಸ್ವೀಟ್ ಕಾರ್ನ್ ಗಳವರೆಗೆ, ಬೇಬಿ ಕಾರ್ನ್ ನಿಂದ ಕಾರ್ನ್ ಮಂಚೂರಿಯವರೆಗೆ ವೈವಿಧ್ಯಮಯ ತಿನಿಸುಗಳ ರೂಪದಲ್ಲಿ ಕಾರ್ನ್ ದೊರೆಯುತ್ತದೆ.
ಆದರೆ ಈ ಕಾರ್ನ್ ಗಳಿಂದ ಸಿಗುವ ಆರೋಗ್ಯದ ಪ್ರಯೋಜನಗಳು, ಹಾನಿಕಾರಕ ಅಂಶಗಳು, ಅಲ್ಲದೇ ಕಾರ್ನ್ನ ಇತಿಹಾಸವನ್ನು ತಿಳಿಸಿಕೊಡುವುದು ಈ ಲೇಖನದ ಉದ್ದೇಶ.
ಕಾರ್ನ್ ಇತಿಹಾಸ
ದಕ್ಷಿಣ ಮೆಕ್ಸಿಕೋದ ರೈತರು ಸುಮಾರು 10 ಸಾವಿರ ವರ್ಷಗಳ ಹಿಂದೆ ಟಿಯೋಸಿಂಟೆ ಎಂಬ ಕಾಡು ಹುಲ್ಲಿನಿಂದ ಮೊದಲ ಬಾರಿಗೆ ಮೆಕ್ಕೆ ಜೋಳವನ್ನು ಬೆಳೆಸಿದರು. ಟಿಯೋಸಿಂಟೆ ಕಾಳುಗಳು ಆಧುನಿಕ ಜೋಳದ ಕಾಳುಗಳಿಗಿಂತ ತುಂಬಾ ಚಿಕ್ಕದಾಗಿದ್ದವು. ರೈತರು ದೊಡ್ಡ ಗಾತ್ರದ ಬೀಜಗಳನ್ನು ಆಯ್ದು ಮರುನಾಟಿ ಮಾಡುತ್ತ ಇಂದಿನ ಗಾತ್ರಕ್ಕೆ ವಿಕಸನಗೊಂಡಿತು.
ಕಾಲಾಂತರದಲ್ಲಿ ಉತ್ತರ ಮತ್ತು ದಕ್ಷಿಣ ಅಮೆರಿಕದ ಸ್ಥಳೀಯರು ಮೆಕ್ಕೆ ಜೋಳವನ್ನು ಪ್ರಮುಖವಾಗಿ ಬೆಳೆಸತೊಡಗಿದರು. ಅಲ್ಲಿಗೆ ಭೇಟಿ ನೀಡಿದ ಯೂರೋಪಿಯನ್ನರು ಇದರ ಬಗ್ಗೆ ತಿಳಿದುಕೊಂಡು ತಮ್ಮ ದೇಶಗಳಿಗೆ ತಂದರು. ಪ್ರಸ್ತುತ ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟçಗಳಲ್ಲಿ ಬೆಳೆಸಲಾಗುತ್ತದೆ.
ಪ್ಲೈ ಮೌತ್ ಕಾಲೋನಿಯ ಯಾತ್ರಿಕರು ಮತ್ತು ವಾಂಪನಾಗ್ ಬುಡಕಟ್ಟಿನ ಜನ ೧೬೨೧ರ ಸುಮಾರಿಗೆ ಥ್ಯಾಂಕ್ಸ್ ಗಿವಿಂಗ್ ಡಿನ್ನರ್‌ನಲ್ಲಿ ಮೆಕ್ಕೆ ಜೋಳವನ್ನು ತಿನ್ನುತ್ತಿದ್ದರು ಎನ್ನಲಾಗಿದೆ.
ಕಾರ್ನ್ ವಿಧಗಳು
ಔಟಿಂಗ್ಸ್ ಸಂದರ್ಭದಲ್ಲಿ ನೀವು ತಿನ್ನುವ ಸಿಹಿ ಕಾರ್ನ್ ಹಳದಿ, ಬಿಳಿ ಅಥವಾ ಎರಡು ಬಣ್ಣಗಳ ಸಂಯೋಜನೆಯಲ್ಲಿ ಬರುತ್ತದೆ. ಇದು ಸ್ವಲ್ಪ ಸಿಹಿ ರುಚಿಯನ್ನು ಹೊಂದಿರುತ್ತದೆ.
ಪಾಪ್‌ಕಾರ್ನ್, ತಯಾರಿಸುವ ಮೊದಲು, ಗಟ್ಟಿಯಾದ ಚಿನ್ನದ ಬಣ್ಣದ ಶೆಲ್‌ನಿಂದ ಆವೃತವಾದ ಮೃದುವಾದ, ಕೇಂದ್ರವನ್ನು ಹೊಂದಿರುತ್ತದೆ. ಒಳಗೆ ಸ್ವಲ್ಪ ನೀರಿನ ಅಂಶವಿರುತ್ತದೆ. ನೀವು ಪ್ಯಾನ್‌ನಲ್ಲಿ ಅಥವಾ ನಿಮ್ಮ ಮೈಕ್ರೋವೇವ್‌ನಲ್ಲಿ ಪಾಪ್‌ಕಾರ್ನ್ ಅನ್ನು ಬಿಸಿ ಮಾಡಿದಾಗ, ಒಳಗಿನ ತೇವಾಂಶವು ಹಬೆಯನ್ನು ನೀಡುತ್ತದೆ. ಉಗಿಯ ಒತ್ತಡದಿಂದ ಸಣ್ಣದಾಗಿ ಸ್ಪೋಟಗೊಂಡು, ಮಧ್ಯಭಾಗದಲ್ಲಿ ಬಿಳಿಯ ತುಪ್ಪಳದಂತಹ ಭಾಗವು ತೆರೆದುಕೊಳ್ಳುತ್ತದೆ.
ಫ್ಲಿಂಟ್ ಅಥವಾ ಇಂಡಿಯನ್ ಕಾರ್ನ್, ಇದು ಸ್ವೀಟ್ ಕಾರ್ನ್ಗಿಂತ ಗಟ್ಟಿಯಾಗಿರುತ್ತದೆ. ಇದು ಕೆಂಪು, ಬಿಳಿ, ನೀಲಿ, ಕಪ್ಪು ಮತ್ತು ಚಿನ್ನದ ಬಣ್ಣದಲ್ಲಿ ಬರುತ್ತದೆ. ಫ್ಲಿಂಟ್ ಕಾರ್ನ್ ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಹೆಚ್ಚಾಗಿ ಬೆಳೆಯುತ್ತದೆ.
ಬಿಳಿ ಮತ್ತು ಹಳದಿ ಬಣ್ಣದಲ್ಲಿ ಬರುವ ಡೆಂಟ್ ಕಾರ್ನ್, ಪ್ರತಿ ಕಾಳಿನ ಮೇಲ್ಭಾಗದಲ್ಲಿ ಚಿಕ್ಕದಾದ ತಗ್ಗು ಹೊಂದಿರುತ್ತದೆ. ಇದರ ಮುಖ್ಯ ಉಪಯೋಗಗಳು ಪಶು ಆಹಾರ, ಟೋರ್ಟಿಲ್ಲಾ ಚಿಪ್ಸ್ ಮತ್ತು ಗ್ರಿಟ್‌ಗಳಂತಹ ಸಿದ್ಧ ಆಹಾರ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಕಾರ್ನ್ ಆರೋಗ್ಯ ಪ್ರಯೋಜನಗಳು:
ಕಾರ್ನ್ ತಿನ್ನುವುದು ಕ್ಯಾನ್ಸರ್ , ಹೃದ್ರೋಗ ಮತ್ತು ಟೈಪ್ ೨ ಮಧುಮೇಹದಂತಹ ಕಾಯಿಲೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ .
ಜೋಳದಲ್ಲಿರುವ ನಾರಿನಂಶವು ಹಸಿವೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದು ನಿಮ್ಮ ಜೀರ್ಣಾಂಗದಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಸಹ ಪೋಷಿಸುತ್ತದೆ, ಇದು ಕರುಳಿನ ಕ್ಯಾನ್ಸರ್‌ನಿಂದ ರಕ್ಷಿಸಲು ಸಹಾಯ ಮಾಡುತ್ತದೆ .
ಕರುಳಿದ ಗೋಡೆಗಳಲ್ಲಿ ಉಂಟಾಗುವ ಡೈವರ್ಟಿಕ್ಯುಲೈಟಿಸ್ ರೋಗವನ್ನು ತಡೆಯಲು ಪಾಪ್‌ಕಾರ್ನ್ ಸಹಾಯ ಮಾಡುತ್ತದೆ . ಒಂದು ಅಧ್ಯಯನದ ಪ್ರಕಾರ ಹೆಚ್ಚು ಪಾಪ್‌ಕಾರ್ನ್ ತಿನ್ನುವ ಪುರುಷರು ಡೈವರ್ಟಿಕ್ಯುಲರ್ ಕಾಯಿಲೆಗೆ ಒಳಗಾಗುವ ಅಪಾಯ ಕಡಿಮೆ.
ಕಾರ್ನ್ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ , ಹಳದಿ ಬಣ್ಣದ ಕಾರ್ನ್ ಕ್ಯಾರೊಟಿನಾಯ್ಡ್ಗಳಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್‌ಗಳ ಉತ್ತಮ ಮೂಲವಾಗಿದೆ, ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಮತ್ತು ಕಣ್ಣಿನ ಪೊರೆಗೆ ಕಾರಣವಾಗುವ ಮಸೂರ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಖನಿಜಗಳ ಜೊತೆಗೆ ಕಾರ್ನ್ ಸಣ್ಣ ಪ್ರಮಾಣದ ವಿಟಮಿನ್ ಬಿ, ಇ ಮತ್ತು ಕೆ ಅನ್ನು ಸಹ ಹೊಂದಿದೆ.
ಹಾನಿಕಾರಕ ಅಂಶಗಳು:
ಕಾರ್ನ್ ಗಳಲ್ಲಿ ಸ್ಟಾರ್ಚ್ ಅಂಶದಿಂದ ಕೂಡಿರುತ್ತದೆ. ಹಾಗಾಗಿ ಇದರಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಹೆಚ್ಚಿರುತ್ತದೆ. ಈ ಕಾರಣಕ್ಕೆ ಡಯಾಬಿಟಿಸ್ ಹೊಂದಿದವರು ಮಿತವಾಗಿ ಕಾರ್ನ್ ತಿನ್ನುವುದು ಉತ್ತಮ, ಹಾಗಂತ ಸಂಪೂರ್ಣವಾಗಿ ಕಾರ್ನ್ ತಿನ್ನುವುದನ್ನೇ ತ್ಯಜಿಸಬೇಕು ಎಂಬ ಅರ್ಥವಲ್ಲ, ಮಿತವಾಗಿರಲಿ ಅಷ್ಟೆ.
ಕೆಲವೊಮ್ಮೆ ಕಾರ್ನ್ ಬೆಳೆಗೆ ಫಂಗಿ ರೋಗ ತಗುಲುತ್ತದೆ. ಹೀಗೆ ರೋಗ ತಗುಲಿದ ಕಾರ್ನ್ ತಿಂದರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಬಹುದು.
ಕಾರ್ನ್ಗಳಲ್ಲಿ ಎಂಟಿ ನ್ಯೂಟ್ರಿಯಂಟ್‌ಗಳು ಇದ್ದು, ಇವು ನಿಮ್ಮ ದೇಹವು ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಗೆ ಅಡ್ಡಿಪಡಿಸಬಹುದು.
ಸಹಕಾರ ಸಂಘಗಳಿಂದ ಗ್ರಾಮೀಣ ಜನರ ಆರ್ಥಿಕತೆಯಲ್ಲಿ ಸುಧಾರಣೆ : ಈರಣ್ಣ ಕಡಾಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ