*ರೈತರ ಜೊತೆ ಎಚ್ ಕೆ ಪಾಟೀಲ್ ನಡೆಸಿದ ಸಂಧಾನ ವಿಫಲ: ಎಂಟನೇ ದಿನಕ್ಕೆ ಕಾಲಿಟ್ಟ ಹೋರಾಟ*

ಪ್ರಗತಿವಾಹಿನಿ ಸುದ್ದಿ : ಗುರ್ಲಾಪೂರದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗಿ ಆಗಿದ್ದ ಬಳಿಕ ಹೋರಾಟಗಾರರ ಮನವೊಲಿಸಲು ಸರ್ಕಾರದ ಪರವಾಗಿ ಹಿರಿಯ ಸಚಿವ ಹೆಚ್ಕೆ ಪಾಟೀಲ್ಗ ಹೊಣೆಗಾರಿಕೆ ನೀಡಲಾಗಿದ್ದು, ಸಂಧಾನ ಸಭೆ ವಿಫಲವಾಗಿದೆ. ಇಂದು ಕೂಡಾ ಹೋರಾಟ ಮುಂದುವರೆಯಲಿದೆ.
ಸರ್ಕಾರದ ಪರ ಹೆಚ್ಕೆ.ಪಾಟೀಲ್ ಸಂಧಾನಕ್ಕೆ ಹೋಗಿದ್ದರು. ಆದರೆ, ನಾವು ಸಿಎಂ ಸಿದ್ದರಾಮಯ್ಯ ಸಭೆಗೆ ಹೋಗುವುದಿಲ್ಲ. ಸಚಿವರಾಗಿ ನೀವೇ ಸಿಎಂ ಸಿದ್ದರಾಮಯ್ಯ ಜೊತೆ ಸಭೆ ಮಾಡಿ ನಿರ್ಧರಿಸಿ. ನಿಮ್ಮ ನಿರ್ಧಾರಕ್ಕಾಗಿ ನಾಳೆ ಸಂಜೆವರೆಗೆ ಕಾಯುತ್ತೇವೆ. ಸರ್ಕಾರದ ನಿರ್ಧಾರ ಇಷ್ಟವಾದ್ರೆ ಪ್ರತಿಭಟನೆ ವಾಪಸ್ ಪಡೆಯುತ್ತೇವೆ. ಇಲ್ಲದಿದ್ದರೆ ಕಬ್ಬು ಬೆಳೆಗಾರರ ಹೋರಾಟ ನಿರಂತರವಾಗಿ ನಡೆಯಲಿದೆ’ ಎಂದು ರೈತರು ಎಚ್ಚರಿಸಿದ್ದಾರೆ.
ನ.7ರಂದು ಬೃಹತ್ ಹೋರಾಟ
ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ, ನವೆಂಬರ್ 7ರಂದು ರಾಷ್ಟ್ರೀಯ ಹೆದ್ದಾರಿ ತಡೆಯುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ನಾವು ಯಾವುದೇ ಕಾರಣಕ್ಕೂ ಸಿಎಂ ಸಭೆಗೆ ಬರೋದಿಲ್ಲ. ಸಿಎಂ ಸಭೆಗೆ ನಾವು ಬಂದರೆ ಜನರು ತಪ್ಪು ತಿಳಿಯುತ್ತಾರೆ ಎಂದು ರೈತ ಮುಖಂಡರು ಹೇಳಿದ್ದಾರೆ. ರೈತರು ಬರೋದಿಲ್ಲ ಎಂದಿದ್ದಕ್ಕೆ ಸಿಎಂ ಜತೆ ಚರ್ಚಿಸಿ ನಿರ್ಧಾರ ತಿಳಿಸುತ್ತೇನೆ ಎಂದು ಎಚ್ ಕೆ ಪಾಟೀಲ್ ಹೇಳಿದ್ದಾರೆ.




