ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಬೆಳಗಾವಿ ಲಕ್ಷ್ಮಿ ಟೇಕಡಿಯಲ್ಲಿರುವ ತಮ್ಮ ಶಾಖಾಮಠದಲ್ಲಿ ಮೌನಾನುಷ್ಠಾನ ಕೈಗೊಂಡಿದ್ದಾರೆ.
ತಮ್ಮ ಶ್ರೀಮಠದಲ್ಲಿ ರುದ್ರಾಕ್ಷಿಯಿಂದ ತಯಾರಿಸಿದ ರುದ್ರ ಮಂಟಪದಲ್ಲಿ ತ್ರಿಕಾಲ ಲಿಂಗ ಪೂಜೆ ಜಪ ತಪ ರುದ್ರಾಭಿಷೇಕ ನೆರವೇರಿಸುತ್ತಿರುವ ಶ್ರೀಗಳು ಸೂರ್ಯೋದಯ & ಸೂರ್ಯಾಸ್ತದ ಸಮಯದಲ್ಲಿ ಅಗ್ನಿಹೋತ್ರ ವನ್ನು ಮಾಡುತ್ತಿದ್ದಾರೆ. ನಂತರ ಗೋಪೂಜೆ ಕೂಡ ಮಾಡುತ್ತಿದ್ದಾರೆ.
ಅಗ್ನಿಹೋತ್ರದ ಜ್ವಾಲೆಯಿಂದ ಹೊರಬರುವ ಹೊಗೆಯ ಮೆದುಳು ಮತ್ತು ನರಗಳ
ಮೇಲೆ ಪ್ರಭಾವಿ ಭಾರಿ ಪರಿಣಾಮ ಬರುತ್ತದೆ. ಅಗ್ನಿಹೋತ್ರದಿಂದ ಔಷದಿಯುಕ್ತ ನಮ್ಮ ಸುತ್ತಲೂ ಒಂದು ರೀತಿಯ ಸಂರಕ್ಷಣಾಕವಚ ವೀರುವುದರ ಅರಿವಾಗುತ್ತದೆ. ಅಗ್ನಿಹೋತ್ರ ದಿಂದ ವಾತಾವರಣ ನಿರ್ಮಾಣವಾಗಿ ವೈರಸ್ ರೋಗಕಾರಿ ಜಂತುಗಳ ಬೆಳವಣಿಗೆಯ ಮೇಲೆ ಪ್ರತಿಬಂಧ ಬರುತ್ತದೆ. ಇದು ಸಂಶೋಧಕರಿಂದ ತಿಳಿದು ಬಂದಿದೆ. ಪಿರಾಮಿಡ್ ಆಕಾರದ ತಾಮ್ರದ ಪಾತ್ರೆಯಲ್ಲಿ ಆಕಳ ಕುಳ್ಳು, ಆಕಳ ತುಪ್ಪ ಎರಡು ಚಿಟಿಕೆ ಅಕ್ಕಿಯಿಂದ ಅಗ್ನಿಹೋತ್ರವನ್ನು ಶ್ರೀಗಳು ಮಾಡುತ್ತಿದ್ದಾರೆ.
ಅಕ್ಟೋಬರ್ 8ರಂದು ಶ್ರೀಗಳ ಮೌನಾನುಷ್ಠಾನ ಮುಕ್ತಾಯವಾಗಲಿದ್ದು ಅಂದು ಸಂಜೆ 5 ಗಂಟೆಗೆ ತಮ್ಮ ಅನುಷ್ಠಾನ ಮಹಾಮಂಗಲ ಅಗ್ನಿಹೋತ್ರದ ಉಪಯೋಗ ಮತ್ತು ಮಾಡುವ ವಿಧಾನ ತಿಳಿಸಿ ಕೊಡಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ