Kannada News

ಬಣ್ಣ…. ನನ್ನ ಒಲವಿನ ಬಣ್ಣ….

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ನಗರ ಮಂಗಳವಾರ ಸಂಪೂರ್ಣ ಬಣ್ಣದಲ್ಲೇ ಮುಳುಗಿ ಹೋಗಿತ್ತು. ನಗರದ ಯಾವು ಮೂಲೆಗೆ ಹೋದರೂ ಬಣ್ಣಗಳದ್ದೇ ಸಾಮ್ರಾಜ್ಯ. ರಸ್ತೆಗಳೆಲ್ಲ ಬಣ್ಣದಿಂದ ತಮ್ಮ ಮೂಲ ಸ್ವರೂಪವನ್ನೇ ಕಳೆದುಕೊಂಡಿದ್ದವು. ಗಲ್ಲಿ ಗಲ್ಲಿಗಳಲ್ಲಿ ಮಕ್ಕಳಿಂದ ಹಿಡಿದು ಮುದುಕರವರೆಗೆ, ಯುವಕ-ಯುವತಿಯರಿಂದ ಹಿಡಿದು, ಮಹಿಳೆಯರು, ಪುರುಷರು ಎನ್ನುವ ಬೇಧವಿಲ್ಲದೆ ಎಲ್ಲರೂ ಬಣ್ಣದಾಟದಲ್ಲಿ ತೊಡಗಿದ್ದರು.

ನಗರದ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಶಾಸಕ ಅಭಯ ಪಾಟೀಲ ಪ್ರತಿ ವರ್ಷದಂತೆ ಹೋಳಿ ಮಿಲನ್ ಆಯೋಜಿಸಿದ್ದರು. ಇಲ್ಲಿ ಒಟ್ಟಾರೆ ಒಂದು ಲಕ್ಷಕ್ಕೂ ಹೆಚ್ಚು ಜನರು ಬಂದು ಬಣ್ಣ ಆಡಿದರು. ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಇಡೀ ಮೈದಾನ ಸಂಪೂರ್ಣ ತುಂಬು ತುಳುಕುತ್ತಿತ್ತು. ನಿರಂತರವಾಗಿ ಜನರು ಬಂದು ಹೋಗುತ್ತಿದ್ದರು. ಸುತ್ತಲಿನ ಅರ್ಧ ಕಿಮೀ ವಾಹನಗಳಿಂದ ತುಂಬಿ ಹೋಗಿತ್ತು.

Home add -Advt

ಅಭಯ ಪಾಟೀಲ ಪೂರ್ಣ ಅವಧಿ ಅಲ್ಲೇ ಇದ್ದು ಹೋಳಿ ಆಟವನ್ನು ನಿರ್ದೇಶಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳೂ ಆಗಮಿಸಿದ್ದು ವಿಶೇಷವಾಗಿತ್ತು.

ನಗರದ ವಿವಿಧೆಡೆ ಸಂಘ ಸಂಸ್ಥೆಗಳು ಹೋಳಿ ಆಟವನ್ನು ಆಯೋಜಿಸಿದ್ದವು. ರಸ್ತೆಗಳಲ್ಲೂ ಜನರು ಬಣ್ಣ ಆಡಿ ಸಂಭ್ರಮಿಸಿದರು. ಇಡೀ ನಗರವನ್ನು ಅಕ್ಷರಶಃ ಬಣ್ಣಗಳೇ ಆಳಿದವು.

Related Articles

Back to top button