ಪ್ರಗತಿವಾಹಿನಿ ಸುದ್ದಿ; ವಾಷಿಂಗ್ಟನ್: ಭೀಕರ ವಿಮಾನ ಅಪಘಾತದಲ್ಲಿ ಹಾಲಿ ವುಡ್ ನಟ, ಟಾರ್ಜನ್ ಸಿನಿಮಾ ಖ್ಯಾತಿಯ ಜೋ ಲಾರಾ ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ.
ಫ್ಲೋರಿಡಾದ ಪಲ್ಮ್ ಬೀಚ್ ಕಡೆಗೆ ಖಾಸಗಿ ಜೆಟ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅನಾಟೊಲಿಯಾದ ಸ್ಮಿರ್ನಾ ವಿಮಾನ ನಿಲ್ದಾಣದಿಂದ ಫ್ಲೋರಿಡಾದ ಪಲ್ಮ್ ಬೀಚ್ ಕಡೆಗೆ ವಿಮಾನ ಪ್ರಯಾಣ ಬೆಳೆಸಿತ್ತು. ಆದರೆ ಟೆಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ಪ್ರೀಸ್ಟ್ ಸರೋವರಕ್ಕೆ ಬಂದು ಅಪ್ಪಳಿಸಿದೆ. ಖಾಸಗಿ ಜೆಟ್ ನಲ್ಲಿ ಬೆಂಕಿ ಸಂಭವಿಸಿದೆ.
ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಧಾವಿಸದರಾದರೂ ರಾತ್ರಿಯಾಗಿದ್ದ ಕಾರಣ ರಕ್ಷಣಾ ಕಾರ್ಯಕ್ಕೆ ಹಿನ್ನಡೆಯಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಸಾವನ್ನಪ್ಪಿದದರೆ ಎಂದು ತಿಳಿದುಬಂದಿದೆ.
ಹಾಲಿವುಡ್ ನಟ ಲಾರಾ, ಪತ್ನಿ ಗ್ವೇನ್ ಲಾರಾ, ಅವರ ಡಯಟ್ ಗುರುಸೇರಿದಂತೆ ಇನ್ನೂ ನಾಲ್ವರು ಸಾವನ್ನಪ್ಪಿದ್ದಾರೆ.
ಲಾಕ್ ಡೌನ್ ವಿಸ್ತರಣೆ ನಿರ್ಧಾರ ; ಸಿಎಂ ಪ್ರತಿಕ್ರಿಯೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ