ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ರಾಜ್ಯ ಸಂಪುಟ ವಿಸ್ತರಣೆ ಬಗ್ಗೆಯೂ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಯುವ ಸಾಧ್ಯತೆ.
ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿ ತಿಂಗಳು ಉರುಳಿದರೂ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿಲ್ಲ. ಸಿಎಂ ಬಿ.ಎಸ್. ಯಡಿಯೂರಪ್ಪ ಸಾಂಪುಟ ವಿಸ್ತರಣೆಗೆ ಮುಂದಾಅದರೂ ಬಿಜೆಪಿ ವರಿಷ್ಠರು ಸಮ್ಮತಿ ನೀಡಿಲ್ಲ. ಈ ಕುರಿತು ಚರ್ಚಿಸಲು ದೆಹಾಲಿಗೆ ತೆರಳಲು ಬಿಎಸ್‌ವೈ ಬಯಸಿದ್ದರೂ ಅಮಿತ್ ಶಾ ಅದಕ್ಕೂ ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಕ್ಕೆ ಆಗಮಿಸಿದಾಗಲೇ ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಅವರೊಂದಿಗೆ ಸಮಾಲೋಚಿಸುವುದಾಗಿ ಬಿಎಸ್‌ವೈ ಹೇಳಿದ್ದರು.
ಇದೀಗ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು, ಹುಬ್ಬಳ್ಳಿಯಲ್ಲಿ ನಡೆಯಲಿರುವ ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಬೆಂಗಳೂರಿಗೆ ಆಅಗಮಿಸಲಿರುವ ಅಮಿತ್ ಶಾ ಭೇಟಿಗೆ ಈಗಾಗಾಲೇ ಸಮಯಾ ನಿಗದಿಯಾಗಿದೆ.
ಸಂಜೆ 6:30 ರಿಂದ 7:30ರ ವರೆಗೆ ರಾಜ್ಯ ನಾಯಕರ ಭೇಟಿಗೆ ಅವಕಾಶ ನೀಡಿದ್ದು, ಈ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯಲಿದೆ. ಆದರೆ ಕೇವಲ ಒಂದು ಗಂಟೆ ಮಾತ್ರ ಭೇಟಿಗೆ ಅವಕಾಶ ನೀಡಿರುವುದರಿಂದ ಸಚಿವ ಸ್ಥಾನ ಯಾರು ಯಾರಿಗೆ ನೀಡಬೇಕು? ಸೋತ ಅಭ್ಯರ್ಥಿಗಳ ಸೇರಿದಂತೆ ಎಲ್ಲಾ ವಿಚಾರಗಳಾ ಚರ್ಚೆ ಅಸಾಧ್ಯವಾಗಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಮತ್ತೆ ದೆಹಲಿಗೆ ತೆರಾಳಾ ಬೇಕಾದ ಸಾಧ್ಯತೆಯೂ ಇಲ್ಲದಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ