ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: “ಛತ್ರಪತಿ ಶಿವಾಜಿ ಮಹಾರಾಜರು ವಿಶ್ವ ಪ್ರಸಿದ್ದ ಪಡೆದ ಮಹಾನ್ ಹೋರಾಟಗಾರ, ಅವರ ಚಿಂತನೆ ತತ್ವಾದರ್ಶಗಳು ಇಂದಿನ ಯುವಕರಿಗೆ ಪ್ರೇರಣೆಯಾಗಲಿ ಎಂದು” ಕೆಪಿಸಿಸಿ ಕಾರ್ಯಾಧ್ಯಕ್ಷ , ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಹೊನಗಾ, ಬೆನ್ನಾಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜ ಅಶ್ವರೂಢ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಒಂದೇ ಜಾತಿಗೆ ಸೀಮಿತರಾಗಿರಲಿಲ್ಲ. ಎಲ್ಲಾ ಸಮುದಾಯದ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿಕೊಂಡು ಮುನ್ನಡೆಯುವ ಮಹಾನ್ ಮಹಾರಾಜರಾಗಿದ್ದರು ಎಂದು ಹೇಳಿದರು.
ಬೆಳಗಾವಿಯಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ:
ಜಿಲ್ಲೆಯಲ್ಲಿ ಅತೀ ದೊಡ್ಡ ಶಿವಾಜಿ ಮಹಾರಾಜರ ಪುತ್ಥಳಿ ಕಡೋಲಿಯಲ್ಲಿ ಇದೆ. ಬಳಿಕ ಯಮಕನಮರಡಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ಇವೆ. ಆದರೆ, ಬೆಳಗಾವಿಯಲ್ಲಿ ಶಿವಾಜಿ ಮಹಾರಾಜರ ಬೃಹತ್ ಪುತ್ಥಳಿ ಪ್ರತಿಷ್ಠಾಪನಾ ಮಾಡಲು ಒಂದು ಕೋಟಿ ರೂ. ಅನುದಾನ ಇರಿಸಲಾಗಿದೆ. ಆದರೆ, ಸರ್ಕಾರದ ಇಚ್ಛಾಶಕ್ತಿ ಕೊರತೆ ಹಿನ್ನೆಲ್ಲೆಯಲ್ಲಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಮಹತ್ವದ ಕಾರ್ಯ ನೇರವೇರಲಿದೆ ಎಂದು ಭರವಸೆ ನೀಡಿದರು.
ಮಹಾನ್ ನಾಯಕರ ಹೋರಾಟದ ಅಧ್ಯಯನ ಅಗತ್ಯ:
ಛತ್ರಪತಿ ಶಿವಾಜಿ ಮಹಾರಾಜರು ವಿಶ್ವಕ್ಕೆ ಮಾದರಿ, ಮಹಾನ್ ನಾಯಕರ ಹೋರಾಟದ ಇತಿಹಾಸ ಬಗ್ಗೆ ಬಹಳಷ್ಟು ಅಧ್ಯಯನ ಮಾಡಬೇಕು. ಇತಿಹಾಸವನ್ನು ಎಲ್ಲಾರಿಗೂ ತಿಳಿಸಿದಾಗ ಮಾತ್ರ ಮಹಾನ್ ನಾಯಕರ ಹೋರಾಟಕ್ಕೆ ಫಲ ಸಿಕ್ಕಂತಾಗುತ್ತದೆ. ಇಂದಿನ ಯುವಕರಿಗೆ ಇದು ಪ್ರೇರಣೆಯಾಗಲಿ. ಶಿವಛತ್ರಪತಿ ಸ್ಮಾರಕ ಪ್ರತಿಷ್ಠಾನ ಸೇವಾ ಸಂಘಟಕರು ಹಾಗೂ ಗ್ರಾಮಸ್ಥರ ಬಹುದಿನಗಳ ಕನಸು ಇಂದು ನನಸಾಗಿದೆ. ಈ ಕಾರ್ಯಕ್ರಮ ಯಶಸ್ವಿಗೆ ನಿಮ್ಮೇಲ್ಲರ ಒಗ್ಗಟವೇ ಕಾರಣ ಎಂದು ಸಂತಸ ವ್ಯಕ್ತಪಡಿಸಿದರು.
ದಲಿತರ ಏಳಿಗೆಗಾಗಿ ನಿಂತ ಶಾಹು ಮಹಾರಾಜರು: ಮಹಾರಾಷ್ಟ್ರದಲ್ಲಿ ದಲಿತ ಸಮುದಾಯದ ಮಕ್ಕಳಿಗೆ ಮೊದಲ ಮೀಸಲಾತಿ ನೀಡಿದವರು ಶಾಹು ಮಹಾರಾಜರು. ಶಿಕ್ಷಣ, ಉದ್ಯೋಗ ವಿವಿಧ ಕ್ಷೇತ್ರದಲ್ಲಿ ದಲಿತ ಸಮುದಾಯದವರು ಮಹಾರಾಷ್ಟ್ರದಲ್ಲಿ ಬಹಳ ಏಳಿಗೆ ಕಂಡಿದ್ದಾರೆ. ಇದಕ್ಕೆಲ್ಲ ಶಾಹು ಮಹಾರಾಜರು ಎಂದು ಅವರು ಹೇಳಿದರು.
ಕೊಲ್ಲಾಪೂರದ ಛತ್ರಪತಿ ಶಿವಾಜಿ ಮಹಾರಾಜರ 13 ನೇ ವಂಶಸ್ಥರಾದ ಯುವರಾಜ ಸಂಭಾಜಿ ರಾಜೆ ಛತ್ರಪತಿ ಅವರು ಮಾತನಾಡಿ, ನಮ್ಮೆಲ್ಲರ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಪುತ್ಥಳಿ ಕಾರ್ಯಕ್ರಮಕ್ಕೆ ಆಗಮಿಸಿರುವುದು ಬಹಳ ಸಂತೋಷ ವಾಗಿದೆ. ಶಾಸಕ ಸತೀಶ್ ಜಾರಕಿಹೊಳಿ ಅವರ ಸತತ ಪ್ರಯತ್ನ ದಿಂದ ಶಿವಾಜಿ ಮಹಾರಾಜರ ಪುತ್ಥಳಿ ಲೋಕಾರ್ಪಣೆ ಗೊಂಡಿದೆ. ನಿಮ್ಮೆಲ್ಲರ ಕನಸು ಈಡೇರಿಸಿದ್ದಾರೆ. ಸಮಾಜಸೇವಕರಾದ ಸತೀಶ್ ಜಾರಕಿಹೊಳಿ ಅವರಿಗೆ ಕಾಲಕಾಲಕ್ಕೂ ಋಣಿಯಾಗಿರಬೇಕು ಎಂದರು.
ನರನಾಡಿಯಲ್ಲಿ ಶಿವಾಜಿ ಮಹಾರಾಜರ ಇದ್ದಾರೆ. ನಿರಂತರವಾಗಿ ಶಿವಾಜಿ ಆರಾಧನೆ ನಡೆಯಲಿ. ಲಕ್ಷಾಂತರ ವೆಚ್ಚದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ಇಂದು ತಲೆ ಎತ್ತಿ ನಿಂತಿದೆ, ಮುಂದಿನ ದಿನಗಳಲ್ಲಿ ಈ ಇಂತಹ ಮಹತ್ವದ ಕಾರ್ಯ ನಡೆಯಬೇಕು ಎಂದು ಹೇಳಿದರು.
ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಶಿವಾಜಿ ಮಹಾರಾಜರು ಭಕ್ತರು ಇದ್ದಾರೆ. ಇಂತಹ ಮಹಾನ್ ನಾಯಕರಿಂದ ಎಲ್ಲ ಧರ್ಮದ ಜನತೆ ಸಮನಾಗಿ ಬೆಳೆಯಲು ಅವಕಾಶ ಸಿಗುತ್ತಿದೆ. ಶಿವಾಜಿ ಮಹಾರಾಜರ ಆದರ್ಶ, ಹೋರಾಟ ಚಿಂತನೆಗೆ ಪ್ರೇರಣೆಗೊಂಡಿರುವ ಶಾಸಕ ಸತೀಶ ಜಾರಕಿಹೊಳಿ ಅವರು ಶಿವಾಜಿ ಮಹಾರಾಜರ ಪ್ರೇಮ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಪರಿಶ್ರಮವನ್ನು ಅವರು ಕೊಂಡಾಡಿದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ವಯಕ್ತಿಕವಾಗಿ ಛತ್ರಪತಿ ಶಿವಾಜಿ ಮಹಾರಾಜ ಅಶ್ವರೂಢ ಮೂರ್ತಿ ಲೋಕಾರ್ಪಣೆ ಸಮಿತಿಗೆ ದೇಣಿಗೆಯನ್ನು ನೀಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿದ್ಯ ಶ್ರೀ ಸದ್ಗುರು ವಿಠ್ಠಲ ವಾಸಕರಮಹಾರಾಜ, ಸಮಾಜ ಸೇವಕರು ಶಿವಾಜಿ ಕಾಗಣಿಕರ್, ವಿನಾಯಕ ಕೆಸರಕರ್ , ಪಂಡಿತ ನಾಗೇಶ ಹರ್ಲೇಕರ್ , ಶಾಸಕರಾದ ಅಂಜಲಿ ನಿಂಬಾಳಕರ್ , ಚನ್ನರಾಜ್ ಹಟ್ಟಿಹೊಳಿ, ಮುಖಂಡರಾದ, ಮದುಕರ್ ಮುಕ್ಕುಂದ್ ಪಾಟೀಲ, ಡಾ. ಮನೋಹರ್ ಎಸ್ ಪಾಟೀಲ್ , ಎಂ ಎಂ ಮುತ್ತೇಗೆಕರ್ , ಜೆಜೆ ಪಾಟೀಲ, ಬೈರು ಲುಮುಣಾ ಟಕ್ಕೇಕರ್ , ಸಿದ್ದು ಸುಣಗಾರ, ಅರುಣ ಕಟಾಂಬಳೆ, ಸತೀಶ್ ಜಾರಕಿಹೊಳಿ ಆಪ್ತಸಹಾಯಕ ಮಲಗೌಡ ಪಾಟೀಲ, ಅಶೋಕ ವನಮನಿ ಕಾಂಗ್ರೆಸ್ ಮುಖಂಡರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಆಪ್ತ ಸಹಾಯಕರು ಯುವಕರು ಊರಿನ ಹಿರಿಯರು ಗ್ರಾಮಸ್ಥರು ಉಪಸ್ಥಿತಿ ಇದ್ದರು.
*ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರ ಗೌರವ ಧನ ಹೆಚ್ಚಳ*
https://pragati.taskdun.com/gram-panchayathhonorariumincrease/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ