Kannada NewsKarnataka NewsLatest

*ಡೇಟಿಂಗ್ ಆಪ್ ನಲ್ಲಿ ಪರಿಚಯವಾದ ಯುವತಿ; ಹನಿಟ್ರ್ಯಾಪ್ ಬಲೆಗೆ ಬಿದ್ದ ಟೆಕ್ಕಿ: ಆರು ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಡೇಟಿಂಗ್ ಆಪ್ ನಲ್ಲಿ ಪರಿಚಯವಾದ ಯುವತಿಯೊಬ್ಬಳು ಟೆಕ್ಕಿಯನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ಡ್ರಗ್ಸ್ ಪಾರ್ಟಿ ಆರೋಪದಲ್ಲಿ ಹಣ ವಸೂಲಿ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಯುವತಿ ಹಾಗೂ ಗ್ಯಾಂಗ್ ನಿಂದ ಮೋಸ ಹೋದ ಟೆಕ್ಕಿ ನೀಡಿದ ದ್ರಿನ ಮೇರೆಗೆ ಬೆಂಗಳೂರಿನ ಯಲಹಂಕಾ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೊದಲಿಗೆ ಯುವತಿ ಸಂಗೀತಾ ಟೆಕ್ಕಿ ರಾಕೇಶ್ ರೆಡ್ಡು ಎಂಬಾತನಿಗೆ ಪಂಬಲ್ ಎಂಬ ಡೇಟಿಂಗ್ ಆಪ್ ಮೂಲಕ ಪರಿಚಯವಾಗಿದ್ದಾಳೆ. ಬಳಿಕ ಆತನನ್ನು ರೂಮಿಗೆ ಕರೆದೊಯ್ದು ಮದ್ಯಪಾನ ಮಾಡಿಸಿದ್ದಾಳೆ. ಈ ವೇಳೆ ರೂಮಿಗೆ ಇನ್ನೂ ಐವರು ಎಂಟ್ರಿ ಕೊಟ್ಟು ಡ್ರಗ್ಸ್ ಪಾರ್ಟಿ ಮಾಡುತ್ತಿದ್ದೀರಾ? ಎಂದು ಬೆದರಿಕೆ ಹಾಕಿದೆ.

ಸಂಗೀತಾ ಬ್ಯಾಗ್ ನಲ್ಲಿ ಮೊದಲೇ ಇಟ್ಟುಕೊಂಡಿದ್ದ ಬೇಕಿಂಗ್ ಸೋಡಾ ತೋರಿಸಿ ಇದು ಡ್ರಗ್ಸ್ ಎಂದು ನಾಟಕವಾಡಿ ದೂರು ಕೊಡುತೇಬೆ ಎಂದು ರಾಕೇಶ್ ರೆಡ್ಡಿಯನ್ನು ಬೆದರಿಸಿ2 ಲಕ್ಷ ವಸೂಲಿ ಮಾಡಿದ್ದಾರೆ. ತಪ್ಪಿಸಿಕೊಂಡು ಬಂದ ಟೆಕ್ಕಿ ರಾಕೇಶ್ ರೆಡ್ಡಿ ಯಲಹಂಕ ಠಾಣೆಯಲ್ಲಿ ದೂರು ನೀಡಿದ್ದಾರೆ.

Home add -Advt

ತನಿಖೆ ನಡೆಸಿದ ಪೊಲೀಸರು ಆರು ಆರೋಪಿಗಳ್ನ್ನು ಬಂಧಿಸಿದ್ದಾರೆ. ಬಂಧಿತರನ್ನು ಶರಣಬಸಪ್ಪ, ರಾಜ್ಯ್ ಮಾನೆ, ಶ್ಯಾಮ್ ಸುಂದರ್, ಅಭಿಷೇಕ್ , ಬೀರಬಲ್ ಹಾಗೂ ಸಂಗೀತಾ ಎಂದು ಗುರುತಿಸಲಾಗಿದೆ.

Related Articles

Back to top button