Kannada NewsLatestNationalUncategorized

*ನಿವೃತ್ತ ಸೈನಿಕನಿಗೆ ಹನಿಟ್ರ್ಯಾಪ್; ಖ್ಯಾತ ನಟಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಕೊಲ್ಲಮ್: ನಿವೃತ್ತ ಸೈನಿಕರೊಬ್ಬರಿಗೆ ಹನಿಟ್ರ್ಯಾಪ್ ಆರೋಪಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟಿಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ.

ನಿತ್ಯಾ ಸಸಿ ಬಂಧಿತ ನಟಿ. ಪರವುರ್ ನಲ್ಲಿ ಹನಿಟ್ರ್ಯಾಪ್ ನಲ್ಲಿ ತೊಡಗಿದ್ದ ಸೀರಿಯಲ್ ನಟಿ ನಿತ್ಯಾ ಸಸಿ ಹಾಗೂ ಆಕೆಯ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ.

75 ವರ್ಷದ ಮಾಜಿ ಸೈನಿಕ ಹಾಗೂ ಕೇರಳದ ವಿಶ್ವವಿದ್ಯಾಲಯದ ಮಾಜಿ ನೌಕರನನ್ನು ನಟಿ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದಳು. ಮಾಜಿ ಸೈನಿಕ ತನ್ನ ಮನೆಯನ್ನು ಬಾಡಿಗೆಗೆ ನೀಡಲು ಯತ್ನಿಸಿದ್ದ. ಈ ವೇಳೆ ಮಾಜಿ ಸೈನಿಕನ ಸಂಪರ್ಕಕ್ಕೆ ಬಂದ ನಟಿ ಆತ್ಮೀಯಳಾಗಿ ವರ್ತಿಸಿದ್ದಾಳೆ. ಮಾಜಿ ಸೈನಿಕನನ್ನು ತನ್ನ ಮನೆಗೆ ಕರೆಸಿಕೊಂಡು ವಿವಸ್ತ್ರಗೊಳಿಸಿ ಬಲವಂತದಿಂದ ಫೋಟೊಗಳನ್ನು ತೆಗೆದು ಬಳಿಕ ಫೋಟೋಗಳ ಮೂಲಕ 25 ಲಕ್ಷ ಹಣ ನೀಡುವಂತೆ ಬ್ಲ್ಯಾಕ್ ಮಾಡಿದ್ದಳಂತೆ. ಮಾಜಿ ಸೈನಿಕ ಸುಮಾರು 11 ಲಕ್ಷ ರೂಪಾಯಿ ನೀಡಿದ್ದರಂತೆ.

ಬಳಿಕ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ ನಟಿ ಹಾಗೂ ಆಕೆಯ ಗೆಳೆಯನ ವಿರುದ್ಧ ಮಾಜಿ ಸೈನಿಕ ಪರವೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ನಟಿ ಹಾಗೂ ಆಕೆಯ ಗೆಳಯ ಬಿನು ಎಂಬಾತನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

Home add -Advt


Related Articles

Back to top button