
ಪ್ರಗತಿವಾಹಿನಿ ಸುದ್ದಿ, ಗೋಕಾಕ– ಗೋಕಾಕದಲ್ಲೊಂದು ಹನಿಟ್ರ್ಯಾಪ್ ಪ್ರಕರಣ ಬಯಲಾಗಿದೆ. ಈ ಸಂಬಂಧ ಮಹಿಳೆ ಸೇರಿ 6 ಜನರನ್ನು ಬಂಧಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ಮಹೇಶ ಅಲಿಯಾಸ್ ಕುಮಾರ ಬೆಳಗಾಂವಕರ (35), ಲಕ್ಷ್ಮಣ ಅಲಿಯಾಸ್ ಲಗಮಣ್ಣ ಕಬ್ಬೂರ (23), ಹುಕ್ಕೇರಿ ತಾಲೂಕಿನ ಕಡಹಟ್ಟಿ ಗ್ರಾಮದ ವಿಠ್ಠಲ ನಾಯಿಕ (27), ಬಸವರಾಜ ಗುಂಡಿ, ಶಿಂಗಳಾಪುರ ಗ್ರಾಮದ ಲಕ್ಷ್ಮಿ ಅಲಿಯಾಸ್ ಸರಸ್ವತಿ ಚಿಗಡೊಳ್ಳಿ (28), ಗಂಗಪ್ಪ ಅಲಿಯಾಸ್ ಗಂಗಾಧರ ಹರಿಜನ (25), ಸಂಗಮನಗರದ ರಮೇಶ ಮಾಂವಕರ (28), ಬೆಣಚಿನಮರಡಿಯ ಶ್ರೀಕಾಂತ ಗಢಾರ್ (30), ಆರೋಪಿಗಳಾಗಿದ್ದು, 6 ಜನರನ್ನು ಬಂಧಿಸಲಾಗಿದೆ.
ಗೋಕಾಕ, ಹುಕ್ಕೇರಿ, ಬೆಳಗಾವಿ ಸೇರಿದಂತೆ ಜಿಲ್ಲೆಯ ಹಲವೆಡೆ ಹನಿಟ್ರ್ಯಾಪ್ ನಡೆಸಿರುವ ಈ ಗ್ಯಾಂಗ್ ಹಣ ದೋಚಿದೆ. ಉದ್ಯಮಿಗಳನ್ನು ಹಾಗೂ ಶ್ರೀಮಂತರನ್ನು ಗುರಿಯಾಗಿಸಿಕೊಂಡು ಮಹಿಳಾ ಆರೋಪಿ ಮೂಲಕ ಕರೆಸಿಕೊಳ್ಳುತ್ತಿದ್ದ ಗ್ಯಾಂಗ್, ನಂತರ ದಾಳಿ ಮಾಡಿ ಹಣ ದೋಚುತ್ತಿದ್ದರು. ಜೊತೆಗೆ, ಅರೆ ನಗ್ನ ದೃಶ್ಯ ಸೆರೆ ಹಿಡಿಯುತ್ತಿದ್ದರು.
ಮಹೇಶ ಎನ್ನುವಾತ ಪತ್ರಕರ್ತ ಎಂದು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದ.
ಬೆಲ್ಲದ ಬಾಗೇವಾಡಿಯ ಬಟ್ಟೆ ವ್ಯಾಪಾರಿಯೊಬ್ಬರು ಮೋಸಹೋದ ನಂತರ ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣ ಬಯಲಾಗಿದೆ. ದೂರು ಆಧರಿಸಿ ಪೊಲೀಸರು ಗ್ಯಾಂಗ್ ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ