
ಪ್ರಗತಿವಾಹಿನಿ ಸುದ್ದಿ: ಹನಿಟ್ರ್ಯಾಪ್ ಪ್ರಕರಣ ಸಂಬಂಧ ಸಿಎಂ ಹಾಗೂ ಗೃಹ ಸಚಿವರಿಗೆ ಭೇಟಿ ಆಗಿರುವ ಸಹಕಾರ ಸಚಿವ ಕೆಎನ್ ರಾಜಣ್ಣ ಅವರ ಮನವಿ ಪತ್ರ ಪೊಲೀಸ್ ಮಹಾನಿರ್ದೇಶಕರಿಗೆ ರವಾನಿಸಲಾಗಿದೆ.
ಗೃಹ ಸಚಿವ ಪರಮೇಶ್ವರ್ ರಿಂದ ಡಿಜಿ & ಐಜಿ ಅಲೋಕ್ ಮೋಹನ್ ಅವರಿಗೆ ಟಿಪ್ಪಣಿ ಸಹಿತ ರವಾನೆ ಮಾಡಲಾಗಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ಡಿಜಿಗೆ ಮನವಿ ಪತ್ರ ರವಾನಿಸಲಾಗಿದೆ.
ನಿನ್ನೆ ರಾತ್ರಿಯೇ ಮುಚ್ಚಿದ ಲಕೋಟೆಯಲ್ಲಿ ಗೌಪ್ಯ ಪತ್ರ ರವಾನಿಸಲಾಗಿದೆ. ಮನವಿ ಪತ್ರದ ಸಾರಾಂಶದ ಆಧಾರದಲ್ಲಿ ಕಾನೂನು ಅಭಿಪ್ರಾಯ ಗೃಹ ಇಲಾಖೆ ಪಡೆಯಲಿದೆ. ಕಾನೂನು ತಜ್ಞರ ಬಳಿಕವಷ್ಟೇ ತನಿಖೆ ಬಗ್ಗೆ ನಿರ್ಧಾರ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.




