Belagavi NewsBelgaum NewsKannada NewsKarnataka NewsLatest

ಬೆಳಗಾವಿಯಲ್ಲಿ ಭುಜ ಮುಟ್ಟಿದ್ದಕ್ಕೆ ಹನಿಟ್ರ್ಯಾಪ್: ಜಾಲ ಪೊಲೀಸ್ ಬಲೆಗೆ

ಶಹಪೂರ ಪೊಲೀಸ್ ಠಾಣೆಯಲ್ಲಿ ಅಪಹರಣ ಹಾಗೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಆರೋಪಿತರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭುಜ ಮುಟ್ಟಿ ಎಬ್ಬಿಸಿದ್ದನ್ನೇ ವೀಡಿಯೋ ಮಾಡಿಕೊಂಡು 15 ಲಕ್ಷ ರೂ. ವಸೂಲಿ ಮಾಡಿ, ಇನ್ನೂ 10 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಹಿಟ್ರ್ಟಾಪ್ ಗ್ಯಾಂಗ್ ನ್ನು ಬೆಳಗಾವಿ ಪೊಲೀಸರು ಬಲೆಗೆ ಕೆಡವಿದ್ದಾರೆ.

ದಿನಾಂಕ: 24.09.2024 ರಂದು ವಿನಾಯಕ ಸುರೇಶ ಕುರಡೆಕರ ಸಾ: ಮಂಗಳವಾರ ಪೇಠ, ತಿಲಕವಾಡಿ, ಬೆಳಗಾವಿ ಇವರು ತಮ್ಮ ಪರಿಚಯದ ದಿವ್ಯಾ ತಂದೆ ಪ್ರದೀಪ ಸಪಕಾಳೆ ವಯಾ: 23 ವರ್ಷ ಸಾ: ಮನಂ 1322 ಬಸವಣ ಗಲ್ಲಿ ಶಹಾಪೂರ ಬೆಳಗಾವಿ ಇವಳು ಮಲಗಿದ್ದಾಗ ಭುಜ ಮುಟ್ಟಿ ಎಬ್ಬಿಸಿದ್ದರ ವಿಡಿಯೋವನ್ನಿಟ್ಟು ಕೊಂಡು, ತಮ್ಮನ್ನು ಅಪಹರಣ ಮಾಡಿ ತನ್ನಿಂದ 25 ಲಕ್ಷ ರೂ ಗೆ ಹಣಕ್ಕೆ ಬೇಡಿಕೆ ಇಟ್ಟು ಈಗಾಗಲೇ ತನ್ನಿಂದ 15 ಲಕ್ಷ ರೂ ಹಣವನ್ನು ಪಡೆದು ಇನ್ನೂ 10 ಲಕ್ಷ ರೂ ಕೊಡುವಂತೆ ಆರೋಪಿತರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದಂತೆ ಆ ಬಗ್ಗೆ ಬೆಳಗಾವಿ ನಗರ ಶಹಾಪೂರ 92/2024 600 189(2), 192, 61(2), 140(2), 115(2), 308(2), 351(2) ಸಹಕಲಂ 190 ಬಿಎನ್ಎಸ್-2023 ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.

ದಿನಾಂಕ: 25.09.2024 ರಂದು ಆರೋಪಿತರಾದ

1] ದಿವ್ಯಾ ತಂದೆ ಪ್ರದೀಪ ಸಪಕಾಳೆ ವಯಾ: 23 ವರ್ಷ ಜಾತಿ: ಹಿಂದೂ ನಾವಿ ಉದ್ಯೋಗ: ವಿದ್ಯಾರ್ಥಿನಿ ಸಾ: ಮನಂ 1322 ಬಸವಣ ಗಲ್ಲಿ ಶಹಾಪೂರ ಬೆಳಗಾವಿ

2] ಪ್ರಶಾಂತ@ಸ್ಪರ್ಷ ಕಲ್ಲಪ್ಪ ಕೋಲಕಾರ ಜಾತಿ: ಹಿಂದೂ ಪರಿಶಿಷ್ಟ ಉದ್ಯೋಗ: ವಿದ್ಯಾರ್ಥಿ ವಯಾ: 25 ವರ್ಷ ಸಾ: ಮನಂ 1028 ಗಾಡೆ ಮಾರ್ಗ ಶಹಾಪೂರ ಬೆಳಗಾವಿ

3] ಕುಮಾರ@ ಡಾಲಿ ಅರ್ಜುನ ಗೋಕರಕ್ಕನವರ ವಯಾ: 29 ವರ್ಷ ಜಾತಿ: ಹಿಂದೂ ವಾಲ್ಮೀಕಿ ಉದ್ಯೋಗ: ಇಲೆಕ್ಟಿಕ್ ಕೆಲಸ ಸಾ: ಜ್ಯೋತಿರ್ಲಿಂಗ ಗಲ್ಲಿ 4ನೇ ಕ್ರಾಸ್ ಕಣಬರಗಿ ಬೆಳಗಾವಿ

4] ರಾಜು ಸಿದ್ರಾಯಿ ಜಡಗಿ ವಯಾ: 29 ವರ್ಷ ವರ್ಷ ಜಾತಿ: ಹಿಂದೂ ವಾಲ್ಮೀಕಿ ಉದ್ಯೋಗ: ಇಲೆಕ್ಟಿಕ್ ಕೆಲಸ ಸಾ: ವಾಲ್ಮೀಕಿ ಗಲ್ಲಿ ಕಣಬರಗಿ ಬೆಳಗಾವಿ ಇವರುಗಳನ್ನು ಬಂಧಿಸಲಾಗಿದೆ.

ಅವರಿಂದ ಪ್ರಕರಣಕ್ಕೆ ಸಂಬಂಧಿಸಿದ 10 ಲಕ್ಷ ರೂ ನಗದು, ಕೃತ್ಯಕ್ಕೆ ಬಳಸಿದ 3 ಮೋಟರ್ ಸೈಕಲ್ ಹಾಗೂ ಒಂದು ಮೋಬೈಲ್ ಪೋನ್ ಸೇರಿದಂತೆ ಒಟ್ಟು 13,40,000/- ಕಿಮ್ಮತ್ತಿನ ಹಣ ಹಾಗೂ ಇತರೆ ಮಾಲನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರಪಡಿಸಿ, ನ್ಯಾಯಾಂಗ ಬಂಧನಕ್ಕೆ ಪಡೆಯಲಾಗಿದೆ.

ಈ ಪ್ರಕರಣದಲ್ಲಿ ಪತ್ತೆ ಕಾರ್ಯ ಕುರಿತು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿಗಳಾದ ರೋಹನ ಜಗದೀಶ, ನಿರಂಜನ ರಾಜ್ ಅರಸ್, ಸಂತೋಷ ಸತ್ಯನಾಯಿಕ ಸಹಾಯಕ ಪೊಲೀಸ್ ಆಯುಕ್ತರು ಮಾರ್ಕೆಟ ಉಪ-ವಿಭಾಗ ಬೆಳಗಾವಿ ನಗರ ರವರ ಮಾರ್ಗದರ್ಶನದಲ್ಲಿ ಶಹಾಪೂರ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್‌ ಎಸ್ ಎಸ್ ಸಿಮಾನಿ ಇವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿಯ ತಂಡವು ಈ ಕಾರ್ಯಾಚರಣೆ ನಡೆಸಿತು.

ತನಿಖಾ ತಂಡದಲ್ಲಿ ಶಹಾಪೂರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಸ್ ಎಸ್ ಸಿಮಾನಿ, ಎಎಸ್‌ಐ ರವರಾದ ಬಿ ಎ ಚೌಗಲಾ, ಆರ್ ಆಯ್ ಸನದಿ ಸಿಹೆಚ್‌ಸಿ ರವರುಗಳಾದ ನಾಗರಾಜ ಓಸಪ್ಪಗೋಳ, ಶಿವಶಂಕರ ಗುಡದೈಗೋಳ, ಸಿಪಿಸಿರವರುಗಳಾದ ಶ್ರೀಧರ ತಳವಾರ, ಜಗದೀಶ ಹಾದಿಮನಿ, ಸಂದೀಪ ಬಾಗಡಿ, ಸಿದ್ದರಾಮೇಶ್ವರ ಮುಗಳಖೋಡ, ವಿಜಯ ಕಮತೆ ಮಹಿಳಾ ಸಿಬ್ಬಂದಿಯವರಾದ ಕಾವೇರಿ ಕಾಂಬಳೆ, ಕು. ಪ್ರತಿಭಾ ಕಾಂಬಳೆ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button