ನಿಯತಿ ಫೌಂಡೇಶನ್ ನಿಂದ 12 ಸಾಧಕಿಯರಿಗೆ ಸಾವಿತ್ರಿ ಬಾಯಿ ಫುಲೆ ಅವಾರ್ಡ್ಸ್ : ಮಾ.7ರಂದು ಗೌರವ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ನಿಯತಿ ಫೌಂಡೇಶನ್ ಈ ಬಾರಿ 12 ಸಾಧಕಿಯರಿಗೆ ಸಾವಿತ್ರಿಬಾಯಿ ಫುಲೆ ವಿಶೇಷ ಗೌರವ ಸನ್ಮಾನ ಮಾಡುವ ಮೂಲಕ ಮಹಿಳಾ ದಿನಾಚರಣೆಗೆ ನಿರ್ಧರಿಸಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ನಿಯತಿ ಫೌಂಡೇಶನ್ ಚೇರಮನ್ ಡಾ.ಸೋನಾಲಿ ಸರ್ನೋಬತ್ ತಿಳಿಸಿದ್ದಾರೆ.
ವೃದ್ದಾಶ್ರಮದ ಸೇವೆಗಾಗಿ ರೇಖಾ ಕಣಬರಕರ್ ಮತ್ತು ಬಾಳವ್ವ ಎಸ್.ಮೂಲಿಮನಿ ಅವರಿಗೆ ವಿಶೇಷ ಸನ್ಮಾನ ನಡೆಯಲಿದೆ. ಜೀವಮಾನ ಸಾಧನೆಗಾಗಿ ವೈಜಯಂತಿ ಚೌಗಲಾ, ಪೊಲೀಸ್ ಸೇವೆಗಾಗಿ ಯಶೋಧಾ ವಂಟಗೂಡಿ, ಸಂಗೀತ ಕ್ಷೇತ್ರದ ಸೇವೆಗಾಗಿ ಅರ್ಚನಾ ಬೆಳಗುಂದಿ, ಸಮಾಜ ಸೇವೆಗಾಗಿ ಪ್ರತಿಭಾ ಆಪ್ಟೆ, ಭರತನಾಟ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ರೇಖಾ ಹೆಗಡೆ, ಶಿಕ್ಷಣ ಮತ್ತು ಸಬಲೀಕರಣದಲ್ಲಿನ ಸಾಧನೆಗಾಗಿ ಕೀರ್ತಿ ಶಿವಕುಮಾರ, ಅರಣ್ಯ ಮತ್ತು ಪ್ರಾಣಿ ಸಂರಕ್ಷಣೆಗಾಗಿ ರೋಹಿಣಿ ಪಾಟೀಲ, ಶಿಕ್ಷಣ ಕ್ಷೇತ್ರದ ಸೇವೆಗಾಗಿ ಸ್ವಾತಿ ಜೋಗ್, ಸಮಾಜ ಸೇವೆಗಾಗಿ ಸುರೇಖಾ ಪಾಟೀಲ ಮತ್ತು ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಮೈತ್ರೇಯಿ ಎಸ್.ಬೈಲೂರು ಅವರಿಗೆ ಗೌರವ ಸನ್ಮಾನ ನಡೆಯಲಿದೆ.
ಭಾನುವಾರ (ಮಾ.7) ಸಂಜೆ 5 ಗಂಟೆಯಿಂದ ಈಫಾ ಹೊಟೆಲ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ರೋಹಿಣಿ ಘೋಟ್ಗೆ ಮತ್ತು ನವೀನಾ ಶೆಟ್ಟಿಗಾರ್ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸೋನಾಲಿ ಸರ್ನೋಬತ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ