ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಮಿನಿ ವಿಧಾನಸೌಧ ಮಾರಾಟಕ್ಕಿಟ್ಟಿದ್ದ ರೈತ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೂವಿನಹಡಗಲಿ ಠಾಣೆಯಲ್ಲಿ 7 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ತನ್ನ ಜಮೀನಿನಲ್ಲಿ ಅಕ್ರಮವಾಗಿ ಮಿನಿ ವಿಧಾನಸೌಧ ನಿರ್ಮಿಸಿದ್ದನ್ನು ವಿರೋಧಿಸಿ ರೈತ ಮಲ್ಲಪ್ಪ ಬಣಕಾರ್ ಕೆಲ ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದೀಗ ರೈತ ಮಲ್ಲಪ್ಪ ಬಣಕಾರ್ ಶವ ಅವರ ಜಮೀನಿನಪಕದ್ದಲ್ಲಿ ಪತ್ತೆಯಾಗಿದ್ದು, ಮೃತದೇಹದ ಬಳಿ ವಿಷದ ಬಾಟಲ್ ಕೂಡ ಪತ್ತೆಯಾಗಿದೆ.
ರೈತನ ಸಾವು ಹಲವು ಅನುಮಾನಕ್ಕೆ ಕಾರಣವಾಗಿದ್ದು, ಪತ್ನಿ ಸರಸ್ವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಇದೀಗ ಲೇಔಟ್ ಮಾಲೀಕ ಹಾಗೂ 6 ಮಂದಿ ಅಧಿಕರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಲೇಔಟ್ ಮಾಲೀಕ ವಿಶ್ವನಾಥ್, ಹೂವಿನಹಡಗಲಿ ಪುರಸಭೆ ಮುಖ್ಯಾಧಿಕಾರಿ ನಾಸೀರ್ ಭಾಷಾ, ಪುರಸಭೆ ಇಂಜಿನಿಯರ್ ಸಿದ್ದಯ್ಯ, ಪುರಸಭೆ ಎಫ್ ಡಿಸಿ ರಾಮಮೂರ್ತಿ, ಸರ್ವೆ ಇಲಾಖೆ ಸೂಪರ್ ವೈಸರ್ ಕೌಸರ್, ಹಡಗಲಿ ಸಹಾಯಕ ಭೂ ದಾಖಲೆಯ ನಿರ್ದೇಶಕ ಹಂಸಕುಮಾರಿ, ತಾಲೂಕು ಸರ್ವೇಯರ್ ಸ್ವರೂಪ್ ಭೂಷಣ್ ಸೇರಿದಂತೆ 7 ಮಂದಿ ವಿರುದ್ಧ ದೂರು ದಾಖಲಾಗಿದೆ.
ಮಿನಿ ವಿಧಾನಸೌಧ ಮಾರಾಟಕ್ಕಿಟ್ಟಿದ್ದ ರೈತ ನಿಗೂಢ ಸಾವು: 7 ಜನರ ವಿರುದ್ಧ ಪ್ರಕರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ