Kannada NewsKarnataka News

ಬೈಲಹೊಂಗಲ ಬಳಿ ಭೀಕರ ಅಪಘಾತ: ಇಬ್ಬರ ದುರ್ಮರಣ

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ -ಸಮೀಪದ ಇಂಚಲ ರಸ್ತೆಯಲ್ಲಿ ಬೈಕ್ ಸವಾರರ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲಿ ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟಣೆ ಸೋಮವಾರ ರಾತ್ರಿ ನಡೆದಿದೆ.
 ಮೃತ ಮತ್ತು ಗಾಯಗೊಂಡವರನ್ನು ಮುತವಾಡ, ವನ್ನೂರ ಗ್ರಾಮಸ್ಥರು ಎಂದು ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಎರಡು ಬೈಕ್ ಗಳ ಮೇಲೆ ತಲಾ ಮೂವರು ಸವಾರಿ ಮಾಡುತ್ತಿದ್ದರು ಎಂದು ಪೊಲೀಸ ಮೂಲಗಳು ತಿಳಿಸಿವೆ.
ಘಟಣಾ ಸ್ಥಳಕ್ಕೆ ಪೊಲೀಸ್ ಇನ್ಸಪೆಕ್ಟರ್ ಪಂಚಾಕ್ಷರಿ ಸಾಲಿಮಠ, ಪಿಎಸ್‌ಐ ಎಫ್.ಆಯ್. ಮಲ್ಲೂರ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಸಾಗಿಸಲಾಗಿದೆ.

 

https://pragati.taskdun.com/walking-god-siddeshwar-swamiji-is-no-more/

Home add -Advt

Related Articles

Back to top button