Belagavi NewsBelgaum NewsKannada NewsKarnataka News

ಭೀಕರ ರಸ್ತೆ ಅಪಘಾತ: ಇಬ್ಬರ ದುರ್ಮರಣ

ಪ್ರಗತಿವಾಹಿನಿ ಸುದ್ದಿ, ಖಾನಾಪುರ : ಪಟ್ಟಣದ ಹೊರವಲಯದ ಬಾಚೋಳಿ ಕ್ರಾಸ್ ಬಳಿ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಕರ ಕಾರು ರಸ್ತೆ ಪಕ್ಕದ ಸೇತುವೆಗೆ ಅಪ್ಪಳಿಸಿ ಪಲ್ಟಿಯಾದ ಪರಿಣಾಮ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ.

ಬೆಳಗಾವಿ ತಾಲೂಕು ಮಚ್ಛೆ ನಿವಾಸಿ, ಕಾರು ಚಾಲಕ ಶಂಕರ ಮೋಹನ ಗೋಮನಾಚೆ (೨೭) ಆತನ ಸ್ನೇಹಿತ, ತಾಲೂಕಿನ ಹತ್ತರವಾಡ ನಿವಾಸಿ ಆಶೀಷ್ ಮೋಹನ ಪಾಟೀಲ (೨೬) ಸಾವನ್ನಪ್ಪಿದ್ದು, ಮಚ್ಛೆ ಗ್ರಾಮದವರಾದ ನಿಖೇಶ್ ಜಯವಂತ್ ಪವಾರ (೨೬) ಮತ್ತು ಜ್ಯೋತಿಬಾ ಗೋವಿಂದ ಗಾಂವಕರ (೨೯) ಗಾಯಗೊಂಡಿದ್ದಾರೆ.

ಶಂಕರ ಹಾಗೂ ಆತನ ಸ್ನೇಹಿತರು ಸೇರಿ ಖಾನಾಪುರಕ್ಕೆ ಪಾರ್ಟಿ ಮಾಡಲು ಬಂದಿದ್ದರು. ಪಾರ್ಟಿ ಮುಗಿಸಿ ಜಾಂಬೋಟಿ ಮಾರ್ಗವಾಗಿ ಬೆಳಗಾವಿಗೆ ತೆರಳುತ್ತಿದ್ದಾಗ ಇವರಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇಳಿಜಾರಿನ ರಸ್ತೆಯಲ್ಲಿ ಕಾರು ಅತಿವೇಗದಲ್ಲಿ ಬಂದು ರಸ್ತೆಬದಿಯ ಸೇತುವೆಗೆ ಡಿಕ್ಕಿ ಹೊಡೆದಿದೆ. ಬಳಿಕ ಎರಡು ಚಕ್ರಗಳು ಕಿತ್ತು ೧೦೦ ಮೀಟರ್ ದೂರದವರೆಗೆ ಸಾಗಿ ಪಲ್ಟಿಯಾಗಿದ್ದರಿಂದ ಸಂಪೂರ್ಣ ಜಖಂಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Home add -Advt

ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಇಬ್ಬರ ಶವಗಳನ್ನು ಖಾನಾಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ತರಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button