Karnataka News

*ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದ ವಾರ್ಡ್ ಬಾಯ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಆಸ್ಪತ್ರೆಯಲ್ಲಿ ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದ ವಾರ್ಡ ಬಾಯ್ ನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಯಲ್ಲಾಲಿಂಗ ಬಂಧಿತ ಆರೋಪಿ. ಕಲಬುರಗಿ ಮೂಲದವನಾಗಿದ್ದಾನೆ. ಬೆಂಗಳೂರಿನ ತಿಲಕನಗರದ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ.

Home add -Advt

ಅ.31ರಂದು ಬೆಳಿಗ್ಗೆ 8:20ರ ಸುಮಾರಿಗೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರು ವಾಶ್ ರೂಮ್ ನ ಕಿಟಕಿಯಲ್ಲಿ ಮೊಬೈಲ್ ಇರುವುದನ್ನು ಕಂಡಿದ್ದಾರೆ. ಅದನ್ನು ಅನ್ ಲಾಕ್ ಮಾಡಿ ನೋಡಿದಾಗ ಅದರಲ್ಲಿ ಹಲವು ರೆಕಾರ್ಡಿಂಗ್ಸ್ ಇರುವುದನ್ನು ಕಂಡು ಗಾಬರಿಯಾಗಿದ್ದಾರೆ. ಅವರು ಮೊಬೈಲ್ ನೊಂದಿಗೆ ಹೊರ ಬರುತ್ತಿದ್ದಂತೆ ಯಲ್ಲಾಲಿಂಗ ತನ್ನ ಮೊಬೈಲ್ ಅದು ತನಗೆ ಕೊಡುವಂತೆ ಕೇಳಿದ್ದಾನೆ. ಆದರೆ ಆಕೆ ಕೊಟ್ಟಿಲ್ಲ, ಈ ವೇಳೆ ಮಹಿಳೆ ಮೇಲೆ ಯಲ್ಲಾಲಿಂಗಾ ಹಲ್ಲೆ ನಡೆಸಲು ಮುಂದಾಗಿದ್ದಾನೆ. ತಕ್ಷಣ ಆಸ್ಪತ್ರೆ ಸಿಬ್ಬಂದಿಗಳು ಆತನನ್ನು ಪೊಲಿಸರಿಗೆ ಒಪ್ಪಿಸಿದ್ದಾರೆ.

ತಿಲಕನಗರ ಪೊಲೀಸರು ಬಿಎನ್ ಎಸ್ ಕಾಯ್ದೆ ಸೆಕ್ಷನ್ 77ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಆರೋಪಿ ವಿಚಾರಣೆ ವೇಳೆ ತಾನು ತಪ್ಪಾಗಿ ವಾಶ್ ರೂಂ ನಲ್ಲಿ ಮೊಬೈಲ್ ಇಟ್ಟಿದ್ದೆ ಎಂದಿದ್ದಾನೆ. ಆದರೆ ಮೊಬೈಲ್ ನಲ್ಲಿರುವ ರೆಕಾರ್ಡ್ಸ್ ಬೇರೆ ಕಥೆ ಹೇಳುತ್ತಿದೆ. ಸದ್ಯ ಆರೋಪಿ ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ತನಿಖೆ ಮುಂದುವರೆದಿದೆ.


Related Articles

Back to top button