*ಇನ್ಮುಂದೆ ಮತ್ತಷ್ಟು ಏರಿಕೆಯಾಗಲಿದೆ ಹೋಟೆಲ್ ತಿಂಡಿ, ಊಟದ ದರ; ಬಾಯಿ ಸುಡಲಿದೆ ಕಾಫಿ-ಟೀ ರೇಟ್*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಉತ್ತಿದೆ. ದಿನಸಿ, ತರಕಾರಿ, ಹಾಲು, ಹಣ್ಣು ಹೀಗೆ ಪ್ರತಿಯೊಂದು ವಸ್ತುಗಳ ಬೆಲೆಯೂ ಹೆಚ್ಚುತ್ತಿದ್ದು, ಇನ್ಮುಂದೆ ಹೋಟೆಲ್ ತಿಂಡಿ, ಊಟದ ದರದಲ್ಲಿಯೂ ಏರಿಕೆ ಮಾಡಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ.
ಹೋಟೆಲ್ ತಿಂಡಿ ದರವನ್ನು ಶೇ.10ರಷ್ಟು ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಹೋಟೆಲ್ ಮಾಲೀಕರ ಸಂಘದ ಅಸೋಸಿಯೇಷನ್ ಸಭೆ ನಡೆಯಲಿದ್ದು, ಸಭೆಯಲ್ಲಿ ಆಗಸ್ಟ್ ನಿಂದ ಹೋಟೆಲ್ ತಿಂಡಿ, ತಿನಿಸು, ಟೀ, ಕಾಫಿ ದರವನ್ನು ಏರಿಸುವ ಬಗ್ಗೆ ಚರ್ಚೆ ನಡೆಯಲಿದೆ.
ಈಗಾಗಲೇ ಹಾಲಿನ ದರ ಲೀಟರ್ ಗೆ 3 ರೂಪಾಯಿ ಹೆಚ್ಚಳವಾಗಿದೆ. ತರಕಾರಿ ದರ ದಿನದಿಂದ ದಿನಕ್ಕೆ ಏರುತ್ತಿದೆ. ಹಾಗಾಗಿ ಹೋಟೆಲ್ ಆಹಾರಗಳ ದರ ಏರಿಸುವುದು ಅನಿವಾರ್ಯವಾಗಿದೆ. ಹೋಟೆಲ್ ತಿಂಡಿಗಳ ದರವನ್ನು ಶೇ.10ರಷ್ಟು ಏರಿಕೆ ಮಾಡಲು ಹೋಟೆಲ್ ಮಾಲೀಕರ ಅಸೋಸಿಯೇಷನ್ ನಿರ್ಧರಿಸಿದೆ. ಕಾಫಿ-ಟೀ 3 ರೂಪಾಯಿ ಹಾಗೂ ತಿಂಡಿ-ತಿನಿಸುಗಳ ದರ 5 ರೂಪಾಯಿ ಏರಿಸಲಾಗುತ್ತಿದೆ. ಊಟದ ದರ 10ರೂಪಾಯಿ ಏರಿಸಲಾಗುತ್ತಿದೆ.
ಈಗಾಗಲೇ ಟೊಮೆಟೊ ದರ ಗಗನಕ್ಕೇರಿದ್ದು, ಜನರು ಮಾರ್ಕೆಟ್ ಗೆ ಹೋದರೂ ಟೊಮೆಟೊ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈಗ ಹೋಟೆಲ್ ತಿಂಡಿ ದರವೂ ಏರಿಕೆಯಾದರೆ ಇನ್ಮುಂದೆ ಜನ ಸಾಮಾನ್ಯರು ಹೋಟೆಲ್ ಗೆ ಹೋಗುವುದು ಕಷ್ಟವಾಗಲಿದೆ. ದುಬಾರಿ ದುನಿಯಾದಲ್ಲಿ ಸಾಮಾನ್ಯ ಜನರ ಬದುಕು ದುಸ್ಥರವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ