ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯರಗಟ್ಟಿ ಸಮೀಪದ ಮಾಡಮಗೇರಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಮನೆ ಕುಸಿದು ಮಗು ಹಾಗೂ ಮಹಿಳೆ ಮೃತಪಟ್ಟಿದ್ದಾರೆ. ಇನ್ನೋರ್ವ ಮಹಿಳೆ ಹಾಗೂ ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಯರಗಟ್ಟಿ ಸಮೀಪದ ಮಾಡಮ್ಮಗೇರಿ ಗ್ರಾಮದಲ್ಲಿ ಈ ದುರಂತ ನಡೆದಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮನೆ ಕುಸಿದುಬಿದ್ದಿದೆ. ಯಲ್ಲವ್ವ ಬಾಗಿಲದ (40) ಹಾಗೂ ಅವರ ಪ್ರಜ್ವಲ್ (5) ಮೃತಪಟ್ಟವರು. ಉದ್ದವ್ವ ಬಾಗಿಲದ ಎಂಬ ಮಹಿಳೆ ಹಾಗೂ ರೂಪಾ ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಸವದತ್ತಿ ತಹಶೀಲ್ದಾರ ಎಂ. ಎನ್. ಮಠದ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
https://pragati.taskdun.com/politics/paycmt-shirtbharath-jodo-yatrecongress/
https://pragati.taskdun.com/latest/haveriheavy-rainhouse-collapsewoman-death/
https://pragati.taskdun.com/crime-news/disel-theft-savadatti-police-arrest-accused-judicialcustody-belagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ