Belagavi NewsBelgaum NewsKannada NewsKarnataka News

*ಚಂದನಹೊಸುರ ಗ್ರಾಮದಲ್ಲಿ ಮನೆ ಗೋಡೆ ಕುಸಿತ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯಾದ್ಯಂತ  ಮುಂದುವರಿದ ರಣಮಳೆಗೆ ಮನೆ ಗೋಡೆಗಳು ಕುಸಿಯುತ್ತಿರುವ ಘಟನೆಗಳು ನಡೆಯುತ್ತಿವೆ. ಬೆಳಗಾವಿ ತಾಲೂಕಿನ ಚಂದನಹೊಸುರ ಗ್ರಾಮದಲ್ಲಿ ಮನೆ ಗೋಡೆ ಕುಸಿತವಾಗಿರುವ ಘಟನೆ ನಡೆದಿದೆ.‌

ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಚಂದನಹೊಸುರ ಗ್ರಾಮದ ಬಸವಂತ ಕಲಾರಕ್ಕೊಪ್ಪ ಎಂಬುವವರಿಗೆ ಸೇರಿದ ಮನೆ ಕುಟುಂಬಸ್ಥರಿದ್ದಾಗಲೇ ಏಕಾಏಕಿ ಕುಸಿದಿದೆ.‌ ಮನೆಯಲ್ಲಿ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಇರುವಾಗಲೇ ಮನೆ ಗೋಡೆ ಕುಸಿತವಾಗಿದೆ.‌ ಮನೆ ಕುಸಿತದಿಂದ ಗಾಬರಿಗೊಂಡು ಮನೆಯಿಂದ ಹೊರಗೆ ಕುಟುಂಬಸ್ಥರು ಓಡಿ ಬಂದಿದ್ದಾರೆ.‌ ಸದ್ಯ ಈ ಘಟನೆಯಲ್ಲಿ ಯಾವುದೇ ಹಾನಿಗಳು ಆಗಿಲ್ಲ.

Home add -Advt

Related Articles

Back to top button