
ಪ್ರಗತಿವಾಹಿನಿ, ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಅನೇಕ ಅವಾಂತರಗಳು ಸೃಷ್ಟಿಯಾಗಿದ್ದು, ಮನೆ ಕುಸಿತಗೊಂಡು ಎರಡು ಆಟೋ ರೀಕ್ಷಾ, ಒಂದು ಬೈಕ್ ಜಖಂಗೊಂಡಿರುವ ಘಟನೆ ನಡೆದಿದೆ.
ಬೆಳಗಾವಿ ನಗರದ ಚವ್ಹಾಟ ಗಲ್ಲಿಯಲ್ಲಿರುವ ಕಲ್ಯಾಣ ಚೌಕ್ ಹತ್ತಿರ ಕೀಶನ ಶಹಾಪೂರಕರ ಎಂಬುವರಿಗೆ ಸೇರಿದ ಮನೆಯೊಂದು ಕುಸಿತವಾಗಿದೆ. ಮನೆಯೊಳಗೆ ಜನರು ವಾಸವಿರದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮನೆಯ ಮುಂಭಾಗದಲ್ಲಿ ನಿಲುಗಡೆ ಮಾಡಿದ್ದ ಎರಡು ಆಟೋ ರೀಕ್ಷಾ, ಒಂದು ದ್ವೀಚಕ್ರ ವಾಹನ ಜಖಂಗೊಂಡಿವೆ.
ಈ ಕುರಿತು ಸಂಭಂದಿಸಿದ ಕಂದಾಯ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ಮನೆಯ ಮಾಲೀಕ ಕೀಶನ ಶಹಾಪೂರಕರ ತಿಳಿಸಿದ್ದಾರೆ. ಹಳೆಯ ಮನೆಯಾಗಿದ್ದರಿಂದ ಬೀಳುವ ಸ್ಥಿತಿಯಲ್ಲಿತ್ತು ದುರಸ್ಥಿ ಮಾಡಿದ ಬಳಿಕ ವಾಪಸ್ ಬರಬೇಕೆಂದು ಕಳೆದ ಎರಡು ಮೂರು ತಿಂಗಳಗಳಿಂದ ಕೀಶನ ಶಹಾಪೂರಕರ ಕುಟುಂಬಸ್ಥರು ಬೇರೆಯಡೆ ವಾಸವಿದ್ದರು ಎನ್ನಲಾಗಿದೆ.