
ಪ್ರಗತಿವಾಹಿನಿ ಸುದ್ದಿ: ಹಣ್ಣು ಹಂಚಲು ಬಂದಿದ್ದೇವೆ ಎಂದು ಮನೆಗೆ ನುಗ್ಗಿದ ಖದೀಮರ ಗುಂಪು ವೃದ್ಧ ದಾಂಪತಿಯ ಕೈ-ಕಾಲು ಕಟ್ಟಿ ಹಾಕಿ ಇಡೀ ಮನೆಯನ್ನೇ ದೋಚಿರುವ ಘಟನೆ ಬೆಂಗಳೂರಿನ ಕೋಡಿಗೆಹಳ್ಳಿಯ ತಿಂಡ್ಲು ರಸ್ತೆಯ ಬಿ.ಕೆ ಲೇಔಟ್ ನಲ್ಲಿ ನಡೆದಿದೆ.
ಚಂದ್ರಶೇಖರ್ (67) ಹಾಗೂ ಅವರ ಪತ್ನಿಯ ಕೈ-ಕಾಲು ಕಟ್ಟಿ ಹಾಕಿ ಕಳ್ಳರು ಮನೆ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಚಂದ್ರಶೇಖರ್ ದಂಪತಿಗೆ ಮೂವರು ಹೆಣ್ಣುಮಕ್ಕಳು. ಮಕ್ಕಳ ಮದುವೆ ಬಳಿಕ ದಂಪತಿ ಇಬ್ಬರೇ ಮನೆಯಲ್ಲಿ ವಾಸವಾಗಿದ್ದರು.
ಮನೆ ಬಳಿ ಬಂದ ಮೂವರು ಅಪರಿಚಿತರು ನಾವು ಇದೇ ಏರಿಯಾದವರು. ವಯಸ್ಸಾದವರಿಗೆ ಹಣ್ಣು ಹಂಚುತ್ತಿದ್ದೇವೆ ಎಂದು ಮನೆಗೆ ಬಂದಿದ್ದಾರೆ. ಹಣ್ಣಿನ ತಟ್ಟೆ ಹಿಡಿದು ಬಂದ ಮೂವರು ಮನೆಯೊಳಗೆ ಬರುತ್ತಿದ್ದಂತೆ ಚಂದ್ರಶೇಖರ್ ಹಾಗೂ ಅವರ ಪತ್ನಿ ಮೇಲೆ ಹಲ್ಲೆ ನಡೆಸಿ ಕಟ್ಟಿಹಾಕಿ ಇಬ್ಬರನ್ನು ಬಾತ್ ರೂಮ್ ನೊಳಗೆ ತಳ್ಳಿ ಮನೆಯಲ್ಲಿದ್ದ ಚಿನ್ನಾಭರಣ, ಹಣ, ಬೆಲೆ ಬಾಳುವ ವಸ್ತುಗಳನ್ನ್ನೆಲ್ಲ ದೋಚಿ ಪರಾರಿಯಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ