ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮರಾಠಿ ಪ್ರೇಮಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಬೆಳಗಾವಿಯ ಬಹುತೇಕ ರಾಜಕಾರಣಿಗಳು ಮರಾಠಿ ಭಾಷೆಯಲ್ಲಿ ಭಾಷಣ,ಪ್ರಚಾರಪತ್ರ, ಶುಭಾಶಯ ಪತ್ರ ಎಲ್ಲವನ್ನೂ ಮಾಡಿದರೂ ಅವರೆಲ್ಲ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ನಂತರದ ಸ್ಥಾನವನ್ನು ಮರಾಠಿಗೆ ನೀಡುತ್ತಾರೆ.
ಆದರೆ ಅನಿಲ ಬೆನಕೆ ಅವರದ್ದು ಮಾತ್ರ ಮರಾಠಿಗೆ ಮೊದಲ ಆದ್ಯತೆ. ಕನ್ನಡಕ್ಕೆ ನಂತರದ ಸ್ಥಾನ, ಕೇವಲ ಕಾಟಾಚಾರಕ್ಕೆನ್ನುವಂತೆ.
ದೀಪಾವಳಿ ಶುಭಾಶಯ ಪತ್ರದಲ್ಲೂ ಹಾಗೇ ಮಾಡಿದ್ದಾರೆ. ಮೇಲ್ಗಡೆ ದೊಡ್ಡದಾಗಿ ಮರಾಠಿಯಲ್ಲಿ ಶುಭಾಶಯ ಹಾಕಿ ನಂತರ ಕೆಳಗಡೆ ಚಿಕ್ಕದಾಗಿ ಕನ್ನಡದಲ್ಲಿ ಶುಭಾಶಯ ಕೋರಿದ್ದಾರೆ.
ವಾಟ್ಸಪ್ ಗ್ರುಪ್ ಗಳಲ್ಲಿ ಅವರ ಶುಭಾಶಯ ಪತ್ರ ನೋಡಿ ಕನ್ನಡಾಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಅಪ್ಪಟ ಕನ್ನಡಾಭಿಮಾನಿ, ವೈದ್ಯ ಡಾ.ವೀರೇಶ ಪಂಚಾಕ್ಷರಿಮಠ ಅವರು ನೇರವಾಗಿ ಗ್ರುಪ್ ಒಂದರಲ್ಲಿ ಬೆನಕೆ ಶುಭಾಶಯಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಅವರ ಉತ್ತರ ಹೀಗಿದೆ –
“ಸರ್ ನಿಮಗೆ ಎಷ್ಟು ಬಾರಿ ಹೇಳಬೇಕು ? ನಿಮಗೆ ಕನ್ನಡಕ್ಕೆ ಗೌರವ ಕೊಡುವದು ಬರದಿದ್ದರೂ ಸರಿ. ಆದರೆ ಕನ್ನಡಕ್ಕೆ ಅವಮಾನ ಮಾಡುವ ಹಕ್ಕು ನಿಮಗಿಲ್ಲ. ನೀವು ಕರ್ನಾಟಕ ಸರ್ಕಾರದ ಜನಪ್ರತಿನಿಧಿ. ಕನ್ನಡಕ್ಕೆ ಕೊನೇಪಕ್ಷ ಅವಮಾನ ಮಾಡಬೇಡಿ. ಮೊದಲು ಕನ್ನಡ, ಕೆಳಗಡೆ ನಿಮಗೆ ಬೇಕಾದ ಭಾಷೆ ಬರೆಸಿಕೊಳ್ಳಿ. ಪದೇ ಪದೇ ಹೇಳಿಸಿಕೊಳ್ಳುವದು ಅಸಹ್ಯ”
ರಾಜ್ಯ ಬಿಜೆಪಿ ಶಾಸಕ ಅನಿಲ ಬೆನಕೆ ಅವರಿಗೆ ಕನ್ನಡ ಪಾಠ ಮಾಡುವ ಕೆಲಸ ಮಾಡಲಿದೆಯೇ?
ಪುನೀತ್ ರಾಜಕುಮಾರ್ ಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಡಾ.ರಮಣರಾವ್ ಮನೆಗೆ ಪೊಲೀಸ್ ಭದ್ರತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ