ಭಾರತದ ಗೂಡಾಚಾರಿ ತನಿಖಾ ಸಂಸ್ಥೆಗಳು ಯಾವವು ? ಹುದ್ದೆಗಳಿಗೆ ನೇಮಕಾತಿ ಹೇಗೆ ? ಯಾರು ಅರ್ಹರು ? ಇಲ್ಲಿದೆ ಪೂರ್ಣ; ವಿವರ ಭಾಗ -2
ಭಾಗ -೨
ಪ್ರಗತಿ ವಾಹಿನಿ ಸುದ್ದಿ
ರಾ (ಆರ್‌ಎಡಬ್ಲ್ಯು- ರೀಸರ್ಚ್ ಎಂಡ್ ಅನಾಲಿಸಿಸ್ ವಿಂಗ್ )
ಜೇಮ್ಸ್ ಬಾಂಡ್ ಸರಣಿ ಸಿನೇಮಾಗಳಿಂದ ಹಿಡಿದು ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಏಕ್ ಥಾ ಟೈಗರ್, ಬೇಬಿ ಮೊದಲಾದ ಚಲನಚಿತ್ರಗಳು ಪತ್ತೆದಾರಿ ತನಿಖಾ ಸಂಸ್ಥೆಗಳು, ಪತ್ತೆದಾರರ ಜೀವ ಶೈಲಿ, ಕಾರ್ಯಾಚರಣೆಯನ್ನು ಸಾಧ್ಯಂತವಾಗಿ ತೆರೆದಿಟ್ಟಿದೆ. ಯಾವುದೇ ವ್ಯಕ್ತಿಯಾದರೂ ತನ್ನ ಬದುಕಿನಲ್ಲಿ ಒಮ್ಮೆಯಾದರೂ ಪತ್ತೆದಾರನಾಗಬೇಕೆಂಬ ಕನಸು ಕಾಣದೆ ಇರಲಾರ.
ಭಾರತದಲ್ಲಿ ದೇಶದ ಆಂತರಿಕವಾಗಿ ಮತ್ತು ವಿದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಅನೇಕ ಪತ್ತೆದಾರಿ ತನಿಖಾ ಸಂಸ್ಥೆಗಳಿವೆ. ಬೇರೆ ಬೇರೆ ತನಿಖಾ ಸಂಸ್ಥೆಗಳ ಕಾರ್ಯವ್ಯಾಪ್ತಿ, ಕಾರ್ಯ ವಿಧಾನ ವಿಭಿನ್ನವಾಗಿರುತ್ತವೆ.
ಭಾರತದಲ್ಲಿ ಸಿಬಿಐ (ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್) ಐಬಿ (ಇಂಟಲಿಜೆನ್ಸ್ ಬ್ಯೂರೊ), ರಾ (ರೀಸರ್ಚ್ ಎಂಡ್ ಅನಾಲಿಸಿಸ್ ವಿಂಗ್), ಎನ್‌ಐಎ (ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ) ಪ್ರಮುಖವಾಗಿವೆ.
ಈ ಪೈಕಿ ರಾ ವಿದೇಶಗಳಲ್ಲಿ ಗೂಡಾಚಾರಿಕೆ ಕಾಯಾಚರಣೆ ನಡೆಸುತ್ತಿದ್ದರೆ, ಐಬಿ ದೇಶದ ಒಳಗೆ ಮತ್ತು ವಿದೇಶಗಳೆರಡರಲ್ಲೂ ಕಾರ್ಯಚರಣೆ ನಡೆಸುತ್ತದೆ. ಸಿಬಿಐ ದೇಶದ ಎಲ್ಲ ಆಂತರಿಕ ಅಪರಾಧಿಕ ಚಟುವಟಿಕೆಗಳ ತನಿಖೆ ಕೈಗೊಳ್ಳುವ ಅಧಿಕಾರ ಹೊಂದಿದ್ದರೆ ಎನ್‌ಐಎ ಉಗ್ರಗಾಮಿ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತದೆ.
ರಾ (ಆರ್‌ಎಡಬ್ಲ್ಯು- ರೀಸರ್ಚ್ ಎಂಡ್ ಅನಾಲಿಸಿಸ್ ವಿಂಗ್ )
ರಾ ಅತ್ಯಂತ ವಿಶಿಷ್ಠವಾದ ಕೇಂದ್ರ ಸರಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆ. ರಾ ದ ಗೂಡಾಚಾರರು ಗೂಡಾಚಾರ ಹುದ್ದೆಯಲ್ಲಿರುವುದು ಅವರ ಕುಟುಂಬಗಳಿಗೂ ಗೊತ್ತಿರುವುದಿಲ್ಲ ಎನ್ನಲಾಗುತ್ತದೆ. ರಾ ಭಾರತದ ಅಕ್ಕಪಕ್ಕದ ದೇಶಗಳು ಮತ್ತು ಇತರ ಕೆಲವು ಭಾರತದ ಚುಟುವಟಿಕೆಗಳ ಮೇಲೆ ಪರಿಣಾಮ ಬೀರುವ ದೇಶಗಳಲ್ಲಿ ಗೂಡಾಚಾರರನ್ನು ನಿಯೋಜಿಸುತ್ತದೆ. ಅಲ್ಲಿಂದ ರಹಸ್ಯ ಕಾರ್ಯಾಚರಣೆಯ ಮೂಲಕ ಭಾರತ ಸರಕಾರದ ರಕ್ಷಣಾ ಇಲಾಖೆ ಮತ್ತು ಗೃಹ ಇಲಾಖೆಗೆ ಮಾಹಿತಿಗಳನ್ನು ರವಾನಿಸುತ್ತದೆ.
ರಾ ನವದೆಹಲಿಯಲ್ಲಿ ಮುಖ್ಯ ಕಚೇರಿ ಹೊಂದಿದೆ.
ವಾರ್ಷಿಕ ಬಜೆಟ್: ೧೮೩ ಕೋಟಿ ರೂ.
ಸಂಸ್ಥಾಪಕರು: ಭಾರತ ಸರ್ಕಾರ
ಕಾರ್ಯಾಚರಣೆ ವ್ಯಾಪ್ತಿ: ವಿದೇಶಗಳು
ಒಟ್ಟು ಸಿಬ್ಬಂದಿ: ೬೬೪
ಹಾಲಿ ಮುಖ್ಯಸ್ಥ: ಸಮಂತ್ ಗೋಯಲ್, ಕಾರ್ಯದರ್ಶಿ.
ವೇತನ: ೯.೬೦ ಲಕ್ಷ- ೧೫.೬೦ ಲಕ್ಷ ರೂ. (ವಾರ್ಷಿಕ)
ಅಲ್ಲದೇ ವರ್ಷಕ್ಕೆ ೨ ತಿಂಗಳು ಪ್ರತ್ಯೇಕ ವೇತನ ಸಿಗುತ್ತದೆ.
ನೇಮಕಾತಿ ಹೇಗೆ : ರಾ ದಲ್ಲಿ ಖಾಯಂ ಕೆಲವೇ ಕೆಲವು ಬೆರಳೆಣಿಕೆಯ ಹುದ್ದೆ ಹೊರತುಪಡಿಸಿ ಕಾಯಂ ಹುದ್ದೆಗಳಿಲ್ಲ. ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದ ಕೆಲವೇ ಕೆಲವು ಆಯ್ದ ಅಭ್ಯರ್ಥಿಗಳನ್ನು ರಾ ಆಯ್ಕೆ ಮಾಡಿಕೊಂಡು ಪ್ರತ್ಯೇಕ ಪರೀಕ್ಷೆ ನಡೆಸುತ್ತದೆ. ಮಾನಸಿಕ ಸಾಮರ್ಥ್ಯ, ಕೌಟುಂಬಿಕ ಹಿನ್ನೆಲೆ ಮೊದಲಾದವುಗಳನ್ನು ಪರಿಶೀಲಿಸಿ ಹುದ್ದೆಗೆ ನೇಮಕ ಮಾಡಿಕೊಳ್ಳುತ್ತಿದ್ದು ರಾದ ಬಹುತೇಕ ಹುದ್ದೆಗಳ ಅವಧಿ ೧-೫ ವರ್ಷಗಳದ್ದಾಗಿರುತ್ತದೆ. ರಾ ದಲ್ಲಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಫೀಲ್ಡ್ ಆಫೀಸರ್, ಅಸಿಸ್ಟೆಂಟ್ ಫೀಲ್ಡ್ ಆಫೀಸರ್ ಹುದ್ದೆಗಳಿರುತ್ತವೆ. ಸಿಕ್ರೇಟ್ ಏಜೆಂಟ್ ಹುದ್ದೆಗಳ ವಿವಿರ ಬಹಿರಂಗಪಡಿಸಿಲ್ಲ. ರಾದ ಕೆಲ ಹುದ್ದೆಗಳ ನೇಮಕಾತಿಗೆ ಭಾರತ ಸರಕಾರದ ಯಾವುದೇ ತನಿಖಾ ಸಂಸ್ಥೆಯ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ