*ವಾಹನ ಸವಾರರ ಗಮನಕ್ಕೆ: ಈ ದಿನಾಂಕದೊಳಗೆ HSRP ನಂಬರ್ ಪ್ಲೇಟ್ ಅಳವಡಿಸದಿದ್ದರೆ ದಂಡ ಪಾವತಿಸಬೇಕು ಎಚ್ಚರ…!*
ಪ್ರಗತಿವಾಹಿನಿ ಸುದ್ದಿ: ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಸರ್ಕಾರ ನೀಡಿರುವ ಗಡುವು ಮುಕ್ತಾಯಕ್ಕೆ ಕೇವಲ 5 ದಿನಗಳು ಮಾತ್ರ ಬಾಕಿ ಇದೆ. ಈವರೆಗೆ ಸರ್ಕಾರ ಹಾಗೂ ಕೋರ್ಟ್ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಹಲವು ಗಡುವುಗಳನ್ನು ನೀಡುತ್ತಾ, ಅವಧಿ ವಿಸ್ತರಣೆ ಮಾಡುತ್ತಾ ಬಂದಿತ್ತು. ಆದರೆ ಈಗ ಕೇವಲ 5 ದಿನಗಳು ಮಾತ್ರ ಬಾಕಿಯಿದ್ದು ಅಷ್ಟರೊಳಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಸೆಪ್ಟೆಂಬರ್ 15ರಂದು ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವು ಮುಗಿಯಲಿದೆ. ರಾಜ್ಯದಲ್ಲಿ ಈವರೆಗೆ 51 ಲಕ್ಷ ವಾಹನಗಳು ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿದ್ದು, ಇನ್ನೂ 1.49 ಕೋಟಿ ವಾಹನಗಳು ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿಲ್ಲ.
ಸೆ.15 ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆ ದಿನವಾಗಿದ್ದು, ಸೆ.16ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಾರಿಗೆ ಇಲಾಖೆಯಿಂದ ಸ್ಪೆಷಲ್ ಡ್ರೈವ್ ಮಾಡಿ ಹೆಚ್.ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನಗಳಿಗೆ ಮೊದಲ ಸಲ 500 ರೂಪಾಯಿ ದಂಡ ವಿಧಿಸಲಾಗುವುದು. ಎರಡನೇ ಸಲಕ್ಕೆ 1000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಅಪರಾಧ ಕೃತ್ಯಗಳ ಬಗ್ಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ -HSRP ನಿಂದ ತಕ್ಷಣ ಮಾಹಿತಿ ಸಿಗಲಿದೆ ಎಂಬ ಉದ್ದೇಶದಿಂದ ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ