Kannada NewsKarnataka NewsLatest

ಉತ್ತರಕೊಡಿ ಸಿದ್ದರಾಮಯ್ಯ: ಆರ್. ಅಶೋಕ ಡಬಲ್ ಟ್ವೀಟ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: #ಉತ್ತರ_ಕೊಡಿ_ಸಿದ್ದರಾಮಯ್ಯ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಟ್ವೀಟ್ ಮಾಡಿದ್ದಾರೆ. ಸಿಎಂ @siddaramaiah ಅವರಿಂದ ಕನ್ನಡಿಗರು ನಿರೀಕ್ಷಿಸುತ್ತಿರುವ ಉತ್ತರಗಳು ಎಂದು ಪ್ರಶ್ನೆಗಳನ್ನು ಎಸೆದಿದ್ದಾರೆ.

ವಾಲ್ಮೀಕಿ ನಿಗಮದ ಹಗರಣ ಕುರಿತು ಮತ್ತು ಮೂಡಾಕ್ಕೆ ಸಂಬಂಧಿಸಿದಂತೆ ತಲಾ 5 ಪ್ರಶ್ನೆಗಳನ್ನು ಸಿದ್ದರಾಮಯ್ಯ ಅವರಿಗೆ ಕೇಳಿದ್ದಾರೆ.

ಅವರ ಟ್ವೀಟ್ ಹೀಗಿದೆ:

ವಾಲ್ಮೀಕಿ ನಿಗಮದಲ್ಲಿ ನಡೆದಿರುವ ₹187 ಕೋಟಿ ಮೊತ್ತದ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ @siddaramaiah ಅವರಿಂದ ಕನ್ನಡಿಗರು ನಿರೀಕ್ಷಿಸುತ್ತಿರುವ ಉತ್ತರಗಳು:

1.) ವಾಲ್ಮೀಕಿ ನಿಗಮಕ್ಕೆ ಸೇರಿದ ವಸಂತ ನಗರದ ಯೂನಿಯನ್ ಬ್ಯಾಂಕ್ ಶಾಖೆಯಿಂದ ಎಂಜಿ ರಸ್ತೆ ಶಾಖೆಗೆ ಅಕ್ರಮವಾಗಿ ದೊಡ್ಡ ಮೊತ್ತ ವರ್ಗಾವಣೆಯಾದಾಗ ಅದು ಇಲಾಖೆಯ ಗಮನಕ್ಕೆ ಬರಲಿಲ್ಲವೇಕೆ?

2.) ಅಷ್ಟು ದೊಡ್ಡ ಮೊತ್ತ ವರ್ಗಾವಣೆ ಆದರೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಪರಿಶೀಲನೆ ನಡೆಸಿರಲಿಲ್ಲವೇ? ಅಥವಾ ತಮ್ಮ ನಿರ್ದೇಶನದಂತೆ ಸುಮ್ಮನಿದ್ದರೆ?

3.) ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಡೆಸುವ ಸಭೆಯಲ್ಲಿ ಈ ಅಕ್ರಮ ಕಣ್ಣಿಗೆ ಬೀಳಲಿಲ್ಲವೇ? ಅಥವಾ ಕಂಡೂ ಕಾಣದ ಹಾಗೆ ಜಾಣ ಕುರುಡುತನ ಪ್ರದರ್ಶನ ಮಾಡಲಾಯಿತೋ?

4.) ಅಕ್ರಮ ಹಣ ವರ್ಗಾವಣೆಯ ಮಾಹಿತಿ ಎನ್ ಟಿಟಿ ಮಾಡ್ಯೂಲ್ ಗೆ ಸಿಗದೆ ಇರಲಿ ಎನ್ನುವ ದುರುದ್ದೇಶದಿಂದ ಎಂಜಿ ರಸ್ತೆ ಖಾತೆಗೆ ಹಣ ವರ್ಗಾವಣೆ ಮಾಡಿದ್ದು ನಿಜವಲ್ಲವೇ?

5.) ಎನ್ ಟಿಟಿ ಮಾಡ್ಯೂಲ್ ಬಗ್ಗೆ ಸಂಪೂರ್ಣ ಮಾಹಿತಿ ಇದ್ದವರಿಂದ ಮಾತ್ರ ಇಷ್ಟು ಪೂರ್ವ ನಿಯೋಜಿತವಾಗಿ ಅಕ್ರಮ ಮಾಡಲು ಸಾಧ್ಯ. ಅಂದಮೇಲೆ ಹಣಕಾಸು ಇಲಾಖೆಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವುದು ಸತ್ಯವಲ್ಲವೇ?

#AnswerMadiSiddaramaiah

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಮೂಡಾದಿಂದ ಪಡೆದಿರುವ ಸೈಟುಗಳ ಅವರ ತವರು ಮನೆಯಿಂದ ಪಡೆದ ಜಮೀನಿನ ಬದಲಾಗಿ ಪಡೆಸಿರುವ ನಿವೇಶನಗಳು ಎಂದು ಸಿದ್ದರಾಮಯ್ಯನವರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಆದರೆ ಸಿಎಂ ಸಿದ್ದರಾಮಯ್ಯನವರ ಬಾಮೈದ ಬಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಅವರು ಆ ಭೂಮಿ ಖರೀದಿಸಿರುವ ಬಗ್ಗೆಯೇ ಸಾಕಷ್ಟು ಅನುಮಾನಗಳಿವೆ.

1.) ಸಿಎಂ ಸಿದ್ದರಾಮಯ್ಯನವರೇ, ತಮ್ಮ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರು ಸದರಿ ಜಮೀನು ಖರೀದಿಸಿದ್ದು ದೇವರಾಜ ಅವರಿಂದ ಎಂದು ಹೇಳುತ್ತಾರೆ. ಆದರೆ ಮಲ್ಲಿಕಾರ್ಜುನ ಸ್ವಾಮಿ ಅವರು ಭೂಮಿ ಖರೀದಿಸಿದಾಗ ದೇವರಾಜ ಅವರ ಹೆಸರಿನಲ್ಲಿ encumebrance certificate ಇರಲಿಲ್ಲ ಎನ್ನುವುದು ಸತ್ಯವಲ್ಲವೇ?

2.) 1968ರಲ್ಲೇ ದೇವರಾಜ ಅವರು ಆ ಜಮೀನನ್ನು ಮೈಲಾರಯ್ಯ ಮತ್ತು ಕುಟುಂಬದವರಿಗೆ ಮಾರಿದ್ದು, ನಂತರ ನಕಲಿ ದಾಖಲೆ ಸೃಷ್ಟಿಸಿ, ತಮ್ಮ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಮಾರಿದ್ದು ಸತ್ಯವಲ್ಲವೇ ಸಿಎಂ ಸಿದ್ದರಾಮಯ್ಯನವರೇ?

3.) ಜಮೀನಿನ ಮಾಲೀಕತ್ವದ ಬಗ್ಗೆ ಇಷ್ಟು ಗೊಂದಲವಿದ್ದರೂ ತಮ್ಮ ಬಾಮೈದ ಜಮೀನು ಖರೀದಿಸಿದ್ದು ಯಾಕೆ? ಜಮೀನು ಖರೀದಿಸುವಾಗ ಸ್ಥಳವನ್ನ ಪರಿಶೀಲನೆ ಮಾಡದೆಯೇ ಖರೀದಿ ಮಾಡಿದರಾ? ಅಥವಾ ಆ ವೇಳೆಗೆ ಅಲ್ಲಿ ಆಗಲೇ ಬಡಾವಣೆ ಅಭಿವೃದ್ಧಿ ಆಗಿತ್ತು ಅಂತ ಜಮೀನು ನೋಡದೆಯೇ ಖರೀದಿ ಮಾಡಿದರಾ?

4.) 2003ರಲ್ಲೆ ಮೂಡಾ ನಿವೇಶನ ಮಾಡಿ ಕ್ರಯಕ್ಕೆ ಹಂಚಿಕೆ ಮಾಡಿದ ಮೇಲೆ 2005ರಲ್ಲಿ ಅದೇ ಜಾಗವನ್ನ ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಲು ವರದಿ ನೀಡಲು ಹೇಗೆ ಸಾಧ್ಯ?

5.) 2010 ರಲ್ಲಿ ಅರಿಶಿನ-ಕುಂಕುಮ ರೂಪದಲ್ಲಿ ತಮ್ಮ ಪತ್ನಿ ಪಾರ್ವತಿ ಅವರಿಗೆ ಜಮೀನು ಸಿಕ್ಕಾಗ ಅವರು ಸ್ಥಳಕ್ಕೆ ಭೇಟಿ ನೀಡಿರಲಿಲ್ಲವೇ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button