Belagavi NewsBelgaum NewsGamesKannada NewsNationalTravel
*ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಹೊಸ ಅತಿಥಿ ಆಗಮನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಸಿಂಹಿಣಿಯೊಂದನ್ನು ತರಲಾಗಿದೆ.
ಫೆಬ್ರುವರಿ 6ರಂದು ಚನ್ನಮ್ಮ ಮೃಗಾಲಯದಲ್ಲಿ ನಿರುಪಮಾ ಎಂಬ ಸಿಂಹಿಣಿ ಅನಾರೋಗ್ಯದಿಂದ ನಿಧನವಾಗಿತ್ತು. ಅದು ಮೃತಪಟ್ಟ ಬಳಿಕ ಇಲ್ಲಿನ ಕೃಷ್ಣಾ ಎಂಬ ಸಿಂಹ ಏಕಾಂಗಿಯಾಗಿತ್ತು.
ಹಾಗಾಗಿ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಈ ಸಿಂಹಿಣಿಯನ್ನು ಭಾನುವಾರ ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಲ್ಲಿರುವ ಕಿರು ಮೃಗಾಲಯಕ್ಕೆ ಕರೆತರಲಾಗಿದೆ. 9 ವರ್ಷದ ಈ ಸಿಂಹಿಣಿ ಹೆಸರು ಭೃಂಗಾ.