Karnataka News

*ಬಾಲಕಿ ಜೊತೆ ಹೆಡ್ ಕಾನ್ಸ್ ಟೇಬಲ್ ಅಸಭ್ಯವರ್ತನೆ: ಹಿಡಿದು ಥಳಿಸಿದ ಸಾರ್ವಜನಿಕರು*

ಪ್ರಗತಿವಾಹಿನಿ ಸುದ್ದಿ: ರಕ್ಷಣೆ ಮಾಡಬೇಕಾದ ಪೋಲೀಸಪ್ಪನೇ ಬಾಲಕಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಹೆಡ್ ಕಾನ್ಸ್ ಟೇಬಲ್ ಗೆ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Home add -Advt

ಈ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ಹುಬ್ಬಳ್ಳಿ ದಕ್ಷಿಣ ಸಂಚಾರಿ ಠಾಣೆ ಹೆಡ್ ಕಾನ್ಸ್ ಟೇಬಲ್ ಖದೀಮನವರ್ ಬಾಲಕಿಗೆ ಕಿರುಕುಳ ನೀಡಿದ ಆರೋಪಿ. ಭಾನುವಾರ ಮಧ್ಯಾಹ್ನ 3-4 ಗಂಟೆ ಸುಮಾರಿಗೆ ಬಾಲಕಿಯರನ್ನು ಮನೆಯೊಳಗೆ ಕರೆದ ಖದೀಮನವರ್, ಅನುಚಿತವಾಗಿ ವರ್ತಿಸಿದ್ದಾನೆ. ಇದನ್ನು ಕಂಡು ಪೋಷಕರು ಆರೋಪಿಗೆ ಹೊಡೆದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿದ್ದು, ಕೇಶ್ವಾಪುರ ಠಾಣೆ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ.

ಹೆಡ್ ಕಾನ್ಸ್ ಟೇಬಲ್ ವಿರುದ್ಧ ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button