Kannada NewsKarnataka NewsLatestTravel

*ಹುಬ್ಬಳ್ಳಿ-ಮುಜಫರ್‌ಪುರ ನಡುವೆ ವಿಶೇಷ ರೈಲುಗಳ ಸಂಚಾರ*

ಪ್ರಗತಿವಾಹಿನಿ ಸುದ್ದಿ: ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೋಳಿ ಹಬ್ಬದ ಸಂದರ್ಭದಲ್ಲಿ ಉಂಟಾಗುವ ಹೆಚ್ಚುವರಿ ಜನದಟ್ಟಣೆಯನ್ನು ನಿಯಂತ್ರಿಸಲು, ನೈರುತ್ಯ ರೈಲ್ವೆಯು ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಮುಜಾಫರ್‌ಪುರ ನಡುವೆ ಐದು ಟ್ರಿಪ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ.

ರೈಲು ಸಂಖ್ಯೆ 07315 ಎಸ್‌ಎಸ್‌ಎಸ್ ಹುಬ್ಬಳ್ಳಿ-ಮುಜಫರ್‌ಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಮಾರ್ಚ್ 4 ರಿಂದ ಏಪ್ರಿಲ್ 1, 2026 ರವರೆಗೆ ಪ್ರತಿ ಬುಧವಾರ ಸಂಜೆ 5.20ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಟು, ಮೂರನೇ ದಿನ (ಶುಕ್ರವಾರ) ಸಂಜೆ 4.00 ಗಂಟೆಗೆ ಮುಜಾಫರ್‌ಪುರ ತಲುಪಲಿದೆ.

Home add -Advt

ಮರು ಪ್ರಯಾಣದ ರೈಲು ಸಂಖ್ಯೆ 07316 ಮುಜಫರ್‌ಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ಮಾರ್ಚ್ 7 ರಿಂದ ಏಪ್ರಿಲ್ 4, 2026 ರವರೆಗೆ ಪ್ರತಿ ಶನಿವಾರ ಮಧ್ಯಾಹ್ನ 1.15ಕ್ಕೆ ಮುಜಫರ್‌ಪುರದಿಂದ ಹೊರಟು, ಮೂರನೇ ದಿನ (ಸೋಮವಾರ) ಬೆಳಿಗ್ಗೆ 11.15ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ಈ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹಲ್ಯಾನಗರ, ಕೋಪರಗಾಂವ್, ಮನ್ಮಾಡ್, ಭುಸಾವಲ್, ಖಾಂಡ್ವಾ, ಇಟಾರ್ಸಿ, ನರಸಿಂಹಪುರ, ಜಬಲ್ಪುರ, ಕಟ್ನಿ, ಸತ್ನಾ, ಮಾಣಿಕ್ಪುರ, ಪ್ರಯಾಗ್‌ರಾಜ್ ಛೆಯೋಕಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸರ್, ಅರಾ, ದಾನಾಪುರ, ಪಾಟ್ಲಿಪುತ್ರ ಜಂಕ್ಷನ್, ಸೋನ್‌ಪುರ ಜಂಕ್ಷನ್ ಮತ್ತು ಹಾಜಿಪುರ ನಿಲ್ದಾಣಗಳಲ್ಲಿ ನಿಲ್ಲಲಿವೆ.

ಈ ರೈಲು ಒಟ್ಟು 23 ಬೋಗಿಗಳನ್ನು ಹೊಂದಿರಲಿದ್ದು, ಇದರಲ್ಲಿ 2 ಎಸಿ ಟು-ಟಯರ್ (AC 2-Tier), 5 ಎಸಿ ತ್ರೀ-ಟಯರ್ (AC 3-Tier), 10 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 2 ಎಸ್ಎಲ್‌ಆರ್‌ಡಿ ಬೋಗಿಗಳು ಇರಲಿವೆ.

Related Articles

Back to top button