
ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ.
ನವದೆಹಲಿಯಿಂದ ಭಾರತೀಯ ವಾಯುಸೇನೆ ವಿಮಾನದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿಯವರನ್ನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿ ನಾಯಕರು ಆತ್ಮೀಯವಾಗಿ ಸ್ವಾಗತಿಸಿದರು.
ಏರ್ ಪೋರ್ಟ್ ನಿಂದ ಹುಬ್ಬಳ್ಳಿ ರೈಲ್ವೆ ಮೈದಾನದವರೆಗೂ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ್ದಾರೆ. ಏರ್ ಪೋರ್ಟ್ ನಿಂದ ಕಾರಿನಲ್ಲಿ ರೈಲ್ವೆ ಮೈದಾನದತ್ತ ಹೊರಟ ಪ್ರಧಾನಿ ಮೋದಿ ಮಾರ್ಗ ಮಧ್ಯೆ ಕಾರಿನಿಂದ ಇಳಿದು ರಸ್ತೆಯುದ್ದಕ್ಕೂ ನೆರೆದಿದ್ದ ಜನಸಾಗರದತ್ತ ಕೈಬೀಸಿ ಸಾಗಿದರು. ಈ ವೇಳೆ ಮೋದಿ ಮೋದಿ ಎಂಬ ಹರ್ಷೋದ್ಘಾರ, ಜಯಘೋಷ ಮುಗಿಲು ಮುಟ್ಟಿತ್ತು. ಬಳಿಕ ರೈಲ್ವೆ ಮೈದಾನದತ್ತ ಸಾಗಿದ ಪ್ರಧಾನಿ ಮೋದಿ ಅವರ ಕಾರಿನ ಮೇಲೆ ಹೂಮಳೆಗರೆದು ಜನರು ಸ್ವಾಗತಿಸಿದರು. ಇಂದಿನಿಂದ 6 ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಯುವಜನತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಯುವಜನೋತ್ಸವಕ್ಕೆ ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಜನರು ಆಗಮಿಸಿದ್ದು, ರೈಲ್ವೆ ಮೈದಾನದಲ್ಲಿ ಕಿಕ್ಕಿರಿದು ಜನರು ನೆರೆದಿದ್ದಾರೆ.
LIVE -ಹುಬ್ಬಳ್ಳಿ ಯುವಜನೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ: ನೇರಪ್ರಸಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ