Latest

ಅಡ್ಡಾದಿಡ್ಡಿ ಕಾರು ಚಲಾಯಿಸಿ ರಾದ್ಧಾಂತ ನಡೆಸಿದ ನಿವೃತ್ತ ಎಸ್ಪಿ

 

ಪ್ರಗತಿವಾಹಿನಿ ಸುದ್ದಿ, ಮಂಗಳೂರು

ನಿವೃತ್ತ ಎಸ್ಪಿಯೊಬ್ಬರು ರಾಂಗ್ ಸೈಡ್ ನಲ್ಲಿ ಅಡ್ಡಾ ದಿಡ್ಡಿ ಕಾರು ಚಲಾಯಿಸಿ ರಾದ್ದಾಂತ ಸೃಷ್ಟಿಸಿದ್ದಾರೆ. 

ಮಂಗಳೂರಿನ ಬಿಜೈ ಬಟ್ಟಗುಡ್ಡೆ ಬಳಿ ಈ ಘಟನೆ ನಡೆದಿದ್ದು, ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದ ನಿವೃತ್ತ ಎಸ್ಪಿ ಮಿತ್ರ ಹೆರಾಜೆ ಅವರ ಕಾರು ಬಿಜೈ ಬಟ್ಟಗುಡ್ಡೆ ರಸ್ತೆಯಲ್ಲಿ  ರಾಂಗ್ ಸೈಡ್ ನಲ್ಲಿ ಓಡಿದೆ. ಮಿತ್ರ ಹೆರಾಜೆ ಮದ್ಯದ ಅಮಲಿನಲ್ಲಿದ್ದರು ಎಂದು ಹೇಳಲಾಗಿದ್ದು, ಬಿಜೈನಿಂದ ಕೆಪಿಟಿಗೆ ಸಾಗುವ ದಾರಿಯ ಮಧ್ಯೆ ರಾಂಗ್ ಸೈಡ್ ನಲ್ಲಿ ಕಾರು ಓಡಿಸಿ ರಸ್ತೆ ಬದಿ ನಿಲ್ಲಿಸಿದ್ದ ಕೆಲ ವಾಹನಗಳಿಗೆ ಡಿಕ್ಕಿ ಹೊಡೆಸಿದ್ದಾರೆ. 

Home add -Advt

ರಸ್ತೆ ಬದಿಯ ಮನೆಯಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿದ್ದ ಯುವಕರು ಅಪಘಾತದ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ್ದಾರೆ.  ಕಾರಿನಲ್ಲಿದ್ದ ವ್ಯಕ್ತಿ ತಾನು ನಿವೃತ್ತ ಎಸ್ಪಿಯೆಂದು ತಿಳಿಸಿದ್ದಾರೆ.  ಇದರಿಂದ ಜನರ ಆಕ್ರೋಶ  ಹೆಚ್ಚಾಗಿದೆ‌. ಭಾರೀ ಸಂಖ್ಯೆಯಲ್ಲಿ ಜನ ಸೇರಿದರು. ಕದ್ರಿ ಮತ್ತು ಉರ್ವಾ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ನಿಯಂತ್ರಣಕ್ಕೆ ಬಾರದಿದ್ದಾಗ ಲಘು ಲಾಠಿ ಪ್ರಹಾರ ನಡೆಸಿದರು.  ನಂತರ ಮಿತ್ರಹೆರಾಜೆ ಅವರನ್ನು ಠಾಣೆಗೆ ಕರೆದು ಕೊಂಡು ಹೋಗಿದ್ದಾರೆ.  ಪ್ರಕರಣ ದಾಖಲಿಸುತ್ತಾರೋ… ಸೆಲ್ಯೂಟ್ ಹೊಡೆದು ಕಳುಹಿಸಿಕೊಡುತ್ತಾರೋ ಕಾದು ನೋಡಬೇಕಿದೆ. 

Related Articles

Back to top button