ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗಿದೆ. ಪ್ರಮುಖ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಚಿಕಿತ್ಸಾ ಘಟಕಗಳನ್ನು ಕೂಡ ತೆರೆಯಲಾಗಿದೆ. ಈ ನಡುವೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಆಯಾ, ಸೂಪರ್ ವೈಸರ್, ಸಿಬ್ಬಂದಿಗಳು ಜೋರಾಗಿ ಹಾಡುಹಾಕಿ ಭರ್ಜರಿ ಟಪ್ಪಾಂಗುಚ್ಚಿ ಸ್ಟೆಪ್ ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಿಮ್ಸ್ ನಲ್ಲಿ ಕೊರೊನಾ ವೈರಸ್ ಚಿಕಿತ್ಸೆಗಾಗಿ ಐಸೋಲೇಷನ್ ವಾರ್ಡ್ ಇದ್ದರೂ ಕೂಡ ಈ ಬಗ್ಗೆ ಗಂಭೀರವಾಗಿ ಪರಿಗಣಿಸದೇ, ಹೆರಿಗೆ ವಾರ್ಡ್ ಪಕ್ಕದ ರೂಮ್ ನಲ್ಲಿ ಜೋರಾಗಿ ಸೌಂಡು ಹಾಕಿ ಭರ್ಜರಿ ಡಾನ್ಸ್ ಗೆ ಸ್ಟೆಪ್ ಹಾಕಿ ಸಿಬ್ಬಂದಿಗಳು ಕುಣಿದು ಕುಪ್ಪಳಿಸಿದ್ದಾರೆ. ಈ ಕುರಿತ ವಿಡಿಯೋ ಈಗ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.
ಕಿಮ್ಸ್ ಆಡಳಿತ ಮಂಡಳಿ ಕೊರೊನಾ ಬಗ್ಗೆ ತಲೆಕಡೆಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ನಿರತವಾಗಿದೆ. ಆದ್ರೆ ಅದೇ ಆಸ್ಪತ್ರೆಯ ಹೆರಿಗೆ ವಾಡ್ 9 ಆಯಾ ಹಾಗೂ ಸೂಪರ್ ವೈಸರ್ ‘ಬಸಣ್ಣಿ ಬಾ’ ಹಾಡಿಗೆ ಕುಣಿದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ