Kannada NewsKarnataka NewsLatest

*ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ: ಅತ್ಯಾಚಾರ ನಡೆಸಿ ಬ್ಲ್ಯಾಕ್ ಮೇಲ್ ಆರೋಪ*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಜಿಮ್ ಟ್ರೇನರ್ ಓರ್ವ ಯುವತಿಯನ್ನು ಮತಾತಂತರ ಮಾಡಿದ್ದಾನೆ ಎನ್ನಲಾಗಿದ್ದು, ಹಿಂದೂ ಸಂಘಟನೆ ಕಾರ್ಯಕರ್ತರು ಆರೋಪಿ ಮನೆಗೆ ನುಗ್ಗಿ ಆತನ ಮೇಲೆ ಹಲೆ ನಡೆಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳಿಯ ವಿಜಯನಗರದ ನಿವಾಸಿ ಸಮೀರ್ ಮುಲ್ಲಾ ಎಂಬ ಜಿಮ್ ಟ್ರೇನರ್ ಯುವತಿಯನ್ನು ಮತಾಂತರ ಮಾಡಿದ್ದಾನೆ ಎನ್ನಲಾಗಿದೆ.

ಈ ಬೆಳವಣಿಗೆ ಬೆನ್ನಲ್ಲೇ ಸಂತ್ರಸ್ತ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಆರೋಪಿ ಸಮೀರ್ ಅಕ್ಕ ತೈಸೀಮಾ ಮುಲ್ಲಾ ನನ್ನ ಸ್ನೇಹಿತೆ. ಜಿಮ್ ಗೆ ಹೋಗಬೇಕೆಂದಾಗ ಆಕೆ ತನ್ನ ಸಹೋದರನ ಜಿಮ್ ಬಗ್ಗೆ ಹೇಳಿದ್ದಳು. ಹೀಗೆ ಜಿಮ್ ಗೆ ಹೋದಾಗ ಸಮೀರ್ ಪರಿಚಯವಾಗಿದೆ. ನಾವೆಲ್ಲರೂ ಸ್ನೇಹಿತರಾಗಿದ್ದೆವು. ಒಟ್ಟಿಗೆ ವೀಕೆಂಡ್ ಪಾರ್ಟಿ, ಬರ್ತ್ ಡೇ ಪಾರ್ಟಿಗಳಲ್ಲಿ ಭೇಟಿಯಾಗುತ್ತಿದ್ದೆವು. ಹೀಗೆ ಒಮ್ಮೆ ಸಮೀರ್ ಮನೆಗೆ ಕರೆದುಕೊಂಡು ಹೋಗಿ ಕುಡಿಯಲು ನೀರು ಕೊಟ್ಟಿದ್ದ ನೀರಿನಲ್ಲಿ ಮತ್ತು ಬರುವ ಮಿಶ್ರಣವನ್ನು ಬೆರೆಸಿದ್ದ. ಕುಡಿದ ಬಳಿಕ ತಲೆ ಸುತ್ತು ಬರುತ್ತಿತ್ತು. ರೂಮಿನಲ್ಲಿ ರೆಸ್ಟ್ ಮಾಡಲು ಹೇಳಿದ್ದ, ಅದಾದ ಬಳಿಕ ಏನಾಯಿತು ಎಂಬುದು ಗೊತ್ತಿಲ್ಲ.

ಮರುದಿನ ಸಮೀರ್ ಭೇತಿಯಾದಾಗ ತನ್ನ ಮೊಬೈಲ್ ನಲ್ಲಿನ ವಿಡಿಯೋ ತೋರಿಸಿದ್ದ. ಆತ ನನ್ನ ಮೇಲೆ ಅತ್ಯಾಚಾರವೆಸಗಿ ವಿಡಿಯೋ ಮಾಡಿಟ್ಟುಕೊಂಡಿದ್ದ. ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ಹಾಗೂ ಹಲವು ಯುವತಿಯರಿಗೆ ಇದೇ ರೀತಿ ಮೋಸ ಮಾಡಿದ್ದಾಗಿ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾಳೆ.

Home add -Advt

Related Articles

Back to top button