Belagavi NewsBelgaum NewsKannada NewsKarnataka NewsLatest

*ಬೆಳಗಾವಿಯಲ್ಲಿ ಹುಕ್ಕಾ ಬಾರ್ ಮೇಲೆ ಪೊಲೀಸ್ ದಾಳಿ; ಇಬ್ಬರ ಬಂಧನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದಲ್ಲಿ ಪೊಲೀಸರು ಹುಕ್ಕಾ ಬಾರ್ ಹಾಗೂ ತಂಬಾಕು ಮಳಿಗೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಟಿಳಕವಾಡಿಯ ಗ್ಯಾಲರಿ ಸ್ಮೋಕ್ & ಚಾಕಲೇಟ್ ಗಿಫ್ಟ್ಸ್ & ಮೋರ್ ಮೇಲೆ ದಾಳಿ ನಡೆಸಲಾಗಿದೆ. ಲೈಸನ್ಸ್ ಇಲ್ಲದೇ ಹುಕ್ಕಾ ಬಾರ್ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಅಲ್ಲದೇ ಇಲ್ಲಿ ಸುರಂಗ ಮಾರ್ಗ ನಿರ್ಮಿಸಿ ಮಾದಕ ವಸ್ತು ಮಾರಾಟ ಮಾಡಲಾಗುತ್ತಿತ್ತು.

ದಾಳಿ ವೇಳೆ ನಿಷೇಧಿತ ಇ-ಸಿಗರೇಟ್, ಹುಕ್ಕಾ ರೋಲ್ ಪೇಪರ್, ಚಾರ್ಕೋ ಕೋಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರು ಮೂಲದ ಅಬುಬಕ್ಕರ್ ಸಿದ್ದಿಕ್, ಶಬಾಬ್ ಅಹ್ಮದ್ ಎಂಬ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.


Related Articles

Back to top button