
ಸಂತ್ರಸ್ತರಿಗೆ ಬಟ್ಟೆ, ಸಾಮಗ್ರಿ ವಿತರಿಸಿದ ಹುಕ್ಕೇರಿ ಶ್ರೀ, ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಹಿರೇ ಬಾಗೇವಾಡಿಯ ಪ್ರವಾಹ ಪೀಡಿತ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಂತ್ರಸ್ತರಿಗೆ ಬಟ್ಟೆ ಮತ್ತಿತರ ಸಾಮಗ್ರಿಗಳನ್ನು ವಿತರಿಸಿದರು.
ರೊಟ್ಟಿ, ಚಟ್ನಿ, ಬಿಸ್ಕೆಟ್, ಹೊದಿಕೆ, ಬೆಡ್ ಸೀಟ್, ರಗ್ಗು ಮುಂತಾದವುಗಳನ್ನು ವಿತರಿಸಲಾಯಿತು. ಸಂತ್ರಸ್ತರ ಸಮಸ್ಯೆಗಳನ್ನು ಆಸಲಿಸಿದ ಶ್ರೀಗಳು ಮತ್ತು ಹೆಬ್ಬಾಳಕರ್, ಯಾರೂ ಹೆದರುವ ಅವಶ್ಯಕತೆ ಇಲ್ಲ. ನಾವೂ ನಿಮ್ಮೊಂದಿಗಿದ್ದೇವೆ. ಸರಕಾರದಿಂದಲೂ ಪರಿಹಾರವನ್ನು ಕೊಡಿಸಲಾಗುವುದು ಎಂದು ಧೈರ್ಯವನ್ನು ತುಂಬಿದರು .
ಬೈಲಹೊಂಗಲದ ಮಹಾಂತೇಶ ಆರಾದ್ರಿಮಠ ವೇದ ಮೂರ್ತಿಗಳು, ಗ್ರಾಮಸ್ಥರು, ಸಿ ಸಿ ಪಾಟೀಲ್, ಚನ್ನರಾಜ ಹಟ್ಟಿಹೊಳಿ, ಸುರೇಶ ಇಟಗಿ, ರಾಮನಗೌಡ, ಜಾಲಿಕೊಪ್ಪ, ಬಸವರಾಜ ಮ್ಯಾಗೋಟಿ, ಶ್ರೀಕಾಂತ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ