ಸಂತ್ರಸ್ತರಿಗೆ ಹುಕ್ಕೇರಿ ಶ್ರೀ ಗಳಿಂದ ಸಾಂತ್ವಾನ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಹುಕ್ಕೇರಿ ಹಾಗೂ ಗೋಕಾಕ ತಾಲೂಕಿನ ಸಾವಿರಾರು ಸಂತ್ರಸ್ತರಿಗೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರ ಸಿಹಿ ವಿತರಿಸಿ ಅವರಿಗೆ ಸಾಂತ್ವಾನ ಹೇಳಿದರು.
ಹುಕ್ಕೇರಿ ತಾಲೂಕಿನ 37 ಗಂಜಿಕೇಂದ್ರಕ್ಕೆ ಗೋಕಾಕ ತಾಲೂಕಿನ ಹುಣಶ್ಯಾಳ ಗ್ರಾಮದ ಸುಮಾರು 8 ಗಂಜಿ ಕೇಂದ್ರಕ್ಕೆ ಭೇಟಿ ಬೀಡಿದ ಶ್ರೀಗಳು ಸ್ವತಃ ಸಂತ್ರಸ್ತರಿಗೆ ಹುಗ್ಗಿ ಮತ್ತು ಅನ್ನ ಸಾಂಬಾರನ್ನು ಊಣಬಡಿಸುವ ಮೂಲಕ ಮಾನವೀಯತೆ ಮೆರೆದರು.
ಈ ಸಂರ್ಭದಲ್ಲಿ ಮಾತನಾಡಿದ ಶ್ರೀಗಳು ಉತ್ತರ ಕರ್ನಾಟಕ ಧಾರಾಕಾರ ಮಳೆಗೆ ತತ್ತರಿಸಿ ಹೋಗಿದೆ. ಇಂಥ ಸಂದರ್ಭದಲ್ಲಿ ಸರಕಾರವು ಕೂಡ ಕಾರ್ಯ ಮಾಡುತ್ತಿದೆ. ಆದರೆ ಸಾರ್ವಜನಿಕರು ಇನ್ನೂ ಹೆಚ್ಚಿನ ಕಾರ್ಯ ಮಾಡಬೇಕಿದೆ. ಬೆಂಗಳೂರುನಲ್ಲಿರುವ ಅನೇಕ ಕನ್ನಡ ಸಂಘಟನೆಗಳು, ಬೇರೆ ಬೇರೆ ಸಮಾಜದ ಸಂಘಟನೆ, ಚಲನಚಿತ್ರ ಉದ್ಯಮ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಉತ್ತರ ಕರ್ನಾಟಕ ಜನರ ಸಮಸ್ಯೆಗೆ ಸ್ಪಂದಿಸುವುದು ಅತ್ಯಗತ್ಯವಾಗಿದೆ ಎಂದರು.
ಎಲ್ಲೆ ತೊಂದರೆಯಾದರೂ ಉತ್ತರ ಕರ್ನಾಟಕದ ಜನ ಮೊದಲು ಧ್ವನಿ ಎತ್ತಿ ಅವರಿಗೆ ಸಹಾಯ ಮಾಡುವ ಭಾವನೆ ಈ ಭಾಗದ ಜನರಲ್ಲಿದೆ. ಇಂದು ಅವರೆ ಕಷ್ಟದಲ್ಲಿದ್ದಾರೆ. ಆದರೆ ಕರುನಾಡಿನ ಜನ ಸಹಾಯ ಮಾಡಬೇಕೆಂದು ಶ್ರೀಗಳು ಕರೆ ನೀಡಿದರು.
ಪಿ.ಜಿ.ಹುಣಶ್ಯಾಳದ ನಿಜಗುಣ ದೇವರು ಮಾತನಾಡಿ, ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅತೀವೃಷ್ಠಿ ಆರಂಭವಾದಾಗಿನಿಂದಲೂ ಕೂಡ ನಿರಂತರವಾಗಿ ಭಕ್ತರಿಗೆ, ಸಂತ್ರಸ್ತರಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ನಮ್ಮ ತಾಲೂಕಿಗೆ ಬಂದು ಸಂತ್ರಸ್ತರಿಗೆ ಸಿಹಿ ಊಟ ತಂದಿರುವದು ಸಂತಸ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಪಿ.ಜಿ.ಹುಣಶ್ಯಾಳದ ವೃದ್ದೆ ಬಂದು ಶ್ರೀ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬಳಿ ಬಂದು ಶ್ರಾವಣ ಮಾಸದಲ್ಲಿ ನಾವು ( ಭಕ್ತರು) ನಿಮಗೆ ಊಟ ಮಾಡಿಸಬೇಕು. ಆದರೆ ನೀವು ಇಂದು ನೀವೆ ಬಂದು ಊಟ ಮಾಡಿಸುವ ಹಾಗೆ ಆಗಿದೆ ಎಂದು ಕಣ್ಣೀರಿಟ್ಟರು. ಕೊಟಬಾಗಿಯಲ್ಲಿನ ಸಂತ್ರಸ್ತರು ಶ್ರೀಗಳ ಕಾರ್ಯವನ್ನು ಶ್ಲಾಘಿಸಿದರು. ಚಿಂದಾನಂದ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಉಪಸ್ಥಿತರಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ