Latest

ಪತ್ನಿಯನ್ನು ಕೊಲೆಗೈದು ಕಥೆ ಕಟ್ಟಿದ್ದ ಪತಿ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಪತ್ನಿಯನ್ನು ತಾನೇ ಕೊಲೆಗೈದು ಬಳಿಕ ದುಷ್ಕರ್ಮಿಗಳು ಪತ್ನಿಯನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದಾರೆ ಎಂದು ಕಥೆ ಕಟ್ಟಿದ್ದ ಪತಿ ಮಹಾಶಯನನ್ನು ಪೊಲೀಸರು ಬಂಧಿಸಿರುವ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ನಡೆದಿದೆ.

ಮಾರ್ಚ್.3ರಂದು ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ಪತಿ ಬಸವರಾಜ್ ಕಟ್ಟಿಮನಿ (40) ಅತ್ಯಾಚಾರ ಮಾಡಿ ತನ್ನ ಪತ್ನಿ ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ತನಗೆ ನ್ಯಾಯಕೊಡಿಸಿ ಎಂದು ಪೊಲೀಸರ ಬಳಿ ಅಲವತ್ತುಕೊಂಡು ನಾಟಕವಾಡಿದ್ದ.

ಬಸವರಾಜ್, ಬಂದರವಾಡ ಗ್ರಾಮದ ಹೊರವಲಯದ ಕೃಷಿ ಜಮೀನಿನಲ್ಲಿ ತನ್ನ ಪತ್ನಿ ಶಾಮಲಾಬಾಯಿಯನ್ನು ಕೊಲೆ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಗಾಣಗಾಪುರ ಪೊಲೀಸರು, ಅನುಮಾನಗೊಂಡು ಪತಿ ಬಸವರಾಜ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾನೇ ಪತ್ನಿಯನ್ನು ಹತ್ಯೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಹಿಜಾಬ್ ತೀರ್ಪು: ಕಾರ್ಯಕರ್ತರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಮನವಿ

Home add -Advt

Related Articles

Back to top button