Kannada NewsLatestNational

*ಐದು ಮಕ್ಕಳ ತಾಯಿಗೆ ಪ್ರೇಮಿ ಜೊತೆ ಮದುವೆ ಮಾಡಿಸಿದ ಗಂಡ*

ಪ್ರಗತಿವಾಹಿನಿ ಸುದ್ದಿ: ಐದು ಮಕ್ಕಳ ತಾಯಿಯನ್ನು ಗಂಡನೆ ಮುಂದೆ ನಿಂತು ಪ್ರೇಮಿ ಜೊತೆ ಮದುವೆ ಮಾಡಿಸಿರುವ ಅಪರೂಪದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಸಂತ ಕಬೀರ್​ ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ದೆಬ್ರಿ ಗ್ರಾಮದ ಬುದ್ಧಿರಾಮ್​ ನಿಶಾದ್​ (45) ಮತ್ತು ಪೂಲ್ಮತಿ (37) ಸುಮಾರು 21 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ 18 ವರ್ಷದ ಮಗ ಸೇರಿದಂತೆ ಒಟ್ಟು ಐವರು ಮಕ್ಕಳಿದ್ದಾರೆ. ಆದರೆ, ಕೆಲವು ತಿಂಗಳಿಂದ ಪೂಲ್ಮತಿ 26 ವರ್ಷದ ಅವಧೇಶ್​ ಎಂಬ ಯುವಕನ ಪ್ರೀತಿಯಲ್ಲಿ ಬಿದ್ದಿದ್ದರು. ಇದು ದಂಪತಿ ನಡುವೆ ಕಲಹಕ್ಕೆ ಕಾರಣವಾಗಿತ್ತು.

Related Articles
Home add -Advt

ಬಳಿಕ 2 ತಿಂಗಳ ಹಿಂದೆ ಪೂಲ್ಮತಿ ಅವರು ಪ್ರಿಯಕರ ಅವಧೇಶ್​ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದರು. ನಂತರ ಅವರನ್ನು ಹುಡುಕಿ ಮನೆಗೆ ಕರೆತರಲಾಗಿತ್ತು. ಕುಟುಂಬಸ್ಥರು ಮತ್ತು ಗ್ರಾಮಸ್ಥರು ಬುದ್ಧಿವಾದ ಹೇಳಿದ್ದರು. ಆದರೂ, ಮನೆಯಲ್ಲಿ ದಂಪತಿ ಮಧ್ಯೆ ನಿತ್ಯ ಜಗಳ ನಡೆಯುತ್ತಿತ್ತು.

ಈ ಹಿನ್ನೆಲೆಯಲ್ಲಿ, ಪತಿ ಬುದ್ಧಿರಾಮ್​ ಅವರು ಪತ್ನಿಯ ಹಠ ಮತ್ತು ಕಿರಿಕಿರಿಗೆ ಬೇಸತ್ತು ಆಕೆಯ ಪ್ರೇಮಿಯ ಜೊತೆ ವಿವಾಹ ಮಾಡಿಸಲು ನಿರ್ಧರಿಸಿ ಗ್ರಾಮದ ಶಿವನ ದೇವಸ್ಥಾನದಲ್ಲಿ ಊರ ಜನರ ಸಮ್ಮುಖದಲ್ಲಿ ಇಬ್ಬರಿಗೆ ವಿವಾಹ ಮಾಡಿಸಿದ್ದಾರೆ. ಸ್ವತಃ ಪತಿಯೇ ವಿವಾಹದ ಎಲ್ಲ ಸಿದ್ಧತೆ ನಡೆಸಿ, ಸಾಂಪ್ರದಾಯಿಕವಾಗಿ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೆ ಬೀಳ್ಕೊಟ್ಟಿದ್ದಾರೆ.

Related Articles

Back to top button