CrimeKannada NewsKarnataka NewsLatestNational

*ಪತ್ನಿಯನ್ನು ಗುಂಡಿಕ್ಕಿ ಕೊಂದ ಪತಿ*

ಪ್ರಗತಿವಾಹಿನಿ ಸುದ್ದಿ: ಕೌಟುಂಬಿಕ ಕಲಹಕ್ಕೆ ಭಾರತೀಯ ಮೂಲದ ಟೆಕ್ಕಿ ತನ್ನ ಪತ್ನಿ ಹಾಗೂ ಮಗನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪತ್ನಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಜಾರ್ಜಿಯಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಶೀತಲ್‌ ವ್ರ್ಜೆಸಿಯನ್‌ ಹತ್ಯೆಯಾದ ಮಹಿಳೆ ಪತ್ನಿ ಕೊಂದ ಪತಿ, 23 ವರ್ಷದ ಪುತ್ರನಿಗೂ ಗುಂಡು ಹಾರಿಸಿದ್ದ. ಗಾಯಗೊಂಡಿದ್ದ ಯುವಕ ಜಾರ್ಜಿಯಾದ ಲಾರೆಲ್‌ ಕ್ರೀಕ್‌ ಟ್ರಯಲ್‌ ನೆರೆಹೊರೆಯಲ್ಲಿ ಜನರಿಂದ ಸಹಾಯಕ್ಕಾಗಿ ಅಂಗಲಾಚಿದ್ದ.

Home add -Advt

ಕೊಲೆ ಆರೋಪಿ 56 ವರ್ಷದ ಕಿರ್ಕ್‌ ಬಿ ವ್ರ್ಜೆಸಿಯನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಿರ್ಕ್ ವಿರುದ್ಧ ಕೊಲೆ, ಎರಡು ತೀವ್ರತರವಾದ ಹಲ್ಲೆ ಆರೋಪಗಳನ್ನು ಹೊರಿಸಲಾಗಿದೆ. ಆರೋಪಿಯನ್ನು ಕಾಬ್ ಕೌಂಟಿ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ.

Related Articles

Back to top button