*ಮಹಿಳಾ ಅಧಿಕಾರಿ ಮೇಲೆಯೇ ಪತಿಯಿಂದ ಹಲ್ಲೆ*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಕೌಟುಂಬಿಕ ಕಲಹಕ್ಕೆ ಪತಿ ಮಹಾಶಯನೊಬ್ಬ ಮಹಿಳಾ ಅಧಿಕಾರಿಗೆ ಕಚೇರಿಗೆ ಬಂದು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಿಲ್ಪಾ ದೊಡ್ಡಮನಿ ಎಂಬುವವರ ಮೇಲೆ ಅವರ ಪತಿ ಶ್ರೀನಿವಾಸ ಮೂರ್ತಿ ಬೊರ್ಗಿ ಕಚೇರಿಗೆ ಬಂದು ಹಲ್ಲೆ ನಡೆಸಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲುಂಗಿ-ಬನಿಯನ್ ನಲ್ಲಿಯೇ ಕಚೇರಿಗೆ ನುಗ್ಗಿರುವ ವ್ಯಕ್ತಿ, ಮಹಿಳಾ ಅಧಿಕಾರಿ ಶಿಲ್ಪಾ ಮೇಲೆ ಹಲ್ಲೆ ನಡೆಸಿದ್ದಾನೆ. ಕಚೇರಿಯ ಸಿಬ್ಬಂದಿಗಳು ಆತನನ್ನು ತಡೆಯಲು ಯತ್ನಿಸಿದ್ದಾರೆ. … Continue reading *ಮಹಿಳಾ ಅಧಿಕಾರಿ ಮೇಲೆಯೇ ಪತಿಯಿಂದ ಹಲ್ಲೆ*