Kannada NewsKarnataka NewsLatest

*ಮಹಿಳಾ ಅಧಿಕಾರಿ ಮೇಲೆಯೇ ಪತಿಯಿಂದ ಹಲ್ಲೆ*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಕೌಟುಂಬಿಕ ಕಲಹಕ್ಕೆ ಪತಿ ಮಹಾಶಯನೊಬ್ಬ ಮಹಿಳಾ ಅಧಿಕಾರಿಗೆ ಕಚೇರಿಗೆ ಬಂದು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಿಲ್ಪಾ ದೊಡ್ಡಮನಿ ಎಂಬುವವರ ಮೇಲೆ ಅವರ ಪತಿ ಶ್ರೀನಿವಾಸ ಮೂರ್ತಿ ಬೊರ್ಗಿ ಕಚೇರಿಗೆ ಬಂದು ಹಲ್ಲೆ ನಡೆಸಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Home add -Advt

ಲುಂಗಿ-ಬನಿಯನ್ ನಲ್ಲಿಯೇ ಕಚೇರಿಗೆ ನುಗ್ಗಿರುವ ವ್ಯಕ್ತಿ, ಮಹಿಳಾ ಅಧಿಕಾರಿ ಶಿಲ್ಪಾ ಮೇಲೆ ಹಲ್ಲೆ ನಡೆಸಿದ್ದಾನೆ. ಕಚೇರಿಯ ಸಿಬ್ಬಂದಿಗಳು ಆತನನ್ನು ತಡೆಯಲು ಯತ್ನಿಸಿದ್ದಾರೆ. ಪತಿ-ಪತ್ನಿ ನಡುವೆ ಜಗಳವಾಗಿದ್ದು, ಇದೇ ಕಾರಣಕ್ಕಾಗಿ ಪತ್ನಿ ಮೇಲೆ ಕಚೇರಿಗೆ ಬಂದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಶಿಲ್ಪಾ ದೊಡ್ಡಮನಿ ಪತಿಯ ವಿರುದ್ಧ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Related Articles

Back to top button