Latest

*ಡಂಬಲ್ಸ್ ನಿಂದ ಮನಬಂದಂತೆ ಹೊಡೆದು ಪತ್ನಿಯನ್ನು ಕೊಂದ ಪತಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡಂಬಲ್ಸ್ ನಿಂದ ಪತ್ನಿಯ ತಲೆಗೆ ಮನಬಂದಂತೆ ಹೊಡೆದು ಕೊಲೆಗೈದಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ.

ಮೊರಿಸ್ ಎಂಬ ವ್ಯಕ್ತಿ ತನ್ನ ಪತ್ನಿ ಸಾಯುವವರೆಗೂ ಆಕೆಯ ತಲೆಗೆ ಡಂಬಲ್ಸ್ ನಿಂದ ಹೊಡೆದಿದ್ದಾನೆ. ಲಿದಿಯಾ (44) ಮೃತ ಮಹಿಳೆ.

ಮೊರಿಸ್ ಹಾಗೂ ಲಿದಿಯಾ 18 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ ಮೂವರು ಗಂಡುಮಕ್ಕಳಿದ್ದಾರೆ. ಆದರೆ ಇತ್ತೀಚಿನ ದಿನದಲ್ಲಿ ಮೊರಿಸ್ ಗೆ ಪತ್ನಿಯ ಮೇಲೆ ಅನುಮಾನ ಶುರುವಾಗಿ, ಸಂಶಯ ವಿಪರೀತಕ್ಕೆ ಹೋಗಿ ಪತ್ನಿಯನ್ನೇ ಕೊಲೆಗೈದಿದ್ದಾನೆ.

ರಾಮಮೂರ್ತಿ ನಗರ ಪೊಲೀಸರು ಆರೋಪಿ ಪತಿ ಮೊರಿಸ್ ನನ್ನು ಬಂಧಿಸಿದ್ದಾರೆ.

*ಬಿಜೆಪಿ ಟಿಕೆಟ್ ಗಾಗಿ ಪೊಲೀಸ್ ಹುದ್ದೆಯನ್ನೇ ತೊರೆದ ಲೋಕಾಯುಕ್ತ ಇನ್ಸ್ ಪೆಕ್ಟರ್*

https://pragati.taskdun.com/lokayuktainspector-mahendra-nayakresignbjp-ticketvidhanasabha-election/

Related Articles

Back to top button