Latest

ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಪ್ರಗತಿವಾಹಿನಿ ಸದ್ದಿ; ಬೆಂಗಳೂರು: ಪತಿಯೇ ಪತ್ನಿಯನ್ನು ಕೊಲೆಗೈದು ನೇಣು ಹಾಕಿಕೊಂದಂತೆ ಬಿಂಬಿಸಿರುವ ಘಟನೆ ಬೆಂಗಳೂರಿನ ಪುಟ್ಟೇನ ಹಳ್ಳಿಯಲ್ಲಿ ನಡೆದಿದೆ.

ನಿಹಾರಿಕಾ ಮೃತ ಮಹಿಳೆ. ನಿಹಾರಿಕಾ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಶಾಲೆಯ ಕಾರ್ಯಕ್ರಮದ ವಿಚಾರವಾಗಿ ಅನಗತ್ಯವಾಗಿ ಜಗಳ ಆರಂಭಸಿದ ಪತಿ ಪತ್ನಿಯನ್ನೇ ಹತ್ಯೆ ಮಾಡಿ ನೇಣು ಬಿಗಿದಿದ್ದಾನೆ ಎಂದು ನಿಹಾರಿಕಾ ಕುಟುಂಬಸ್ಥರು ಆರೋಪಿಸಿದ್ದಾರೆ.

Home add -Advt

ನಾಲ್ಕು ವರ್ಷಗಳಿಂದ ನಿಹಾರಿಕಾಳನ್ನು ಪ್ರೀತಿಸಿ ವಿವಹವಾಗಿದ್ದ ವ್ಯಕ್ತಿ. ಮದುವೆಗೆ ಕುಟುಂಬದವರ ವಿರೋಧವೂ ಇತ್ತು. ಆದರೂ ವರ್ಷಗಟ್ಟಲೇ ಮನೆಯವರನ್ನೆಲ್ಲ ಒಪ್ಪಿಸಿ ಕೆಲ ತಿಂಗಳ ಹಿಂದಷ್ಟೇ ಅದ್ದೂರಿಯಾಗಿ ವಿವಾಹವಾಗಿದ್ದರು. ವಿವಾಹದ ಬಳಿಕ ನಿಹಾರಿಕಾಳಿಗೆ ಪತಿ ಕಿರುಕುಳ ನೀಡಲು ಪದೇ ಪದೇ ಜಗಳವಾದಲು ಶುರು ಮಾಡಿದ್ದ. ಇದರಿಂದ ಬೇಸತ್ತ ನಿಹಾರಿಕಾ ಅಕ್ಕನ ಮನೆಗೆ ಬಂದು ವಾಸವಾಗಿದ್ದಳು.

ಎರಡು ದಿನಗಳ ಹಿಂದೆ ನಿಹಾರಿಕಾಳನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ ಕರೆದೊಯ್ದ ಪತಿ ಜಗಳವಾಡಿದ್ದ. ಇದೀಗ ನಿಹಾರಿಕಾ ಶವ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಮ್ಮ ಮಗಳನ್ನು ಕೊಲೆ ಮಾಡಿ ಅಳಿಯನೇ ನೇಣು ಹಾಕಿದ್ದಾನೆ ಎಂದು ಕುಟುಂಬದವರು ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ರಾಜೀವ್ ಗಾಂಧಿ ಫೌಂಡೇಶನ್ ಲೈಸನ್ಸ್ ರದ್ದು

https://pragati.taskdun.com/latest/rajeev-gandhi-foundationlicensecancelled/

Related Articles

Back to top button