
ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಕೌಟುಂಬಿಕ ಕಲಹಕ್ಕೆ ಪತಿಯೊಬ್ಬ ಪತ್ನಿಯನ್ನೇ ಗುಂಡಿಟ್ಟು ಹತ್ಯೆ ಮಾಡಿರುವ ಘೋರ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರು ಕೆ.ಗ್ರಾಮದಲ್ಲಿ ನಡೆದಿದೆ.
ಹನುಮವ್ವ (36) ಮೃತ ಮಹಿಳೆ. ಬಸವರಾಜ್ ಪತ್ನಿಯನ್ನು ಹತ್ಯೆಗೈದ ಪತಿ. ಮದುವೆಯಾದಾಗಿನಿಂದಲೂ ಗಂಡ-ಹೆಂಡತಿ ನಡುವೆ ಸಣ್ನಸಣ್ಣ ವಿಚಾರಕ್ಕೂ ಜಗಳವಾಗುತ್ತಿತ್ತು. ಪತಿಯ ಕಿರುಕುಳಕ್ಕೆ ನೊಂದು ಪತ್ಮಿ ಹನುಮವ್ವ ಮನೆ ಬಿಟ್ಟು ತವರು ಮನೆ ಸೇರಿದ್ದಳು.
ಪತ್ನಿ ತವರು ಮನೆ ಸೇರಿದರೂ ಅಲ್ಲಿಯೂ ಬಿಡದ ಪತಿ ಕಿರುಕುಳ ನೀಡುತ್ತಲೇ ಇದ್ದ ಎನ್ನಲಾಗಿದೆ. ಇದೀಗ ತವರು ಮನೆಯಲ್ಲಿದ್ದ ಪತ್ನಿಯನ್ನು ಬಸವರಾಜ್ ಗುಂಡಿಟ್ಟು ಹತ್ಯೆಗೈದಿದ್ದಾನೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ