Latest

ಕೆಳಗಿನ ಮನೆಯ ಗಂಡ, ಮೇಲಿನ ಮನೆಯ ಹೆಂಡತಿ ನಾಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪತ್ನಿ ಕಾಣುತ್ತಿಲ್ಲ ಎಂದು ಮೇಲಿನ ಮನೆಯ ಪತಿ, ಪತಿ ನಾಪತ್ತೆಯಾಗಿದ್ದಾರೆ ಎಂದು ಕೆಳಗಿನ ಮನೆಯ ಪತ್ನಿ  ಪ್ರತ್ಯೇಕ ದೂರು ದಾಖಲಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜ್ಞಾನಭಾರತಿ ಪೊಲೀಸ್ ಠಾಣೆಯ ವ್ಯಾಪ್ತಿಯ ಮಾರುತಿ ನಗರ ಕಟ್ಟಡವೊಂದರಲ್ಲಿ ಎರಡು ಕುಟುಂಬಗಳು ವಾಸವಿದ್ದು, 12 ವರ್ಷಗಳ ಹಿಂದೆ ನವೀದ್ ಹಾಗೂ ಝೀನತ್ ವಿವಾಹವಾಗಿದ್ದರು. ದಂಪತಿ ಕಟ್ಟಡದ ಕೆಳಮಹಡಿಯಲ್ಲಿ ವಾಸವಾಗಿದ್ದರು. ಮುಬಾರಕ್ ಹಾಗೂ ಶಾಜಿಯಾ ದಂಪತಿ ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ವಾಸವಾಗಿದ್ದರು.

ಡಿಸೆಂಬರ್ 9ರಂದು ಶಾಜಿಯಾ ಹಾಗೂ ನವೀದ್ ಮನೆಯಿಂದ ಹೊರಹೋದವರು ವಾಪಸ್ ಬಂದಿಲ್ಲ ಎಂದು ಝೀನತ್ ಹಾಗೂ ಮುಬಾರಕ್ ಆರೋಪಿಸಿದ್ದಾರೆ.

ತಿಂಗಳ ಹಿಂದೆಯೇ ಈ ಬಗ್ಗೆ ಝೀನತ್ ಹಾಗೂ ಮುಬಾರಕ್ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.

Home add -Advt

ಶಾಜಿಯಾ ಪುಟ್ಟ ಮಗುವನ್ನು ಕರೆದುಕೊಂಡು ಹೋಗಿದ್ದಾಳೆ ಎಂದು ಆಕೆಯ ಪತಿ ಮುಬಾರಕ್ ಕಣ್ಣೀರಿಟ್ಟಿದ್ದಾರೆ.

ದೂರು ನೀಡಿ ಒಂದು ತಿಂಗಳು ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಝೀನತ್ ಹಾಗೂ ಮುಬಾರಕ್ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಭೇಟಿಯಾಗಿ ದೂರು ನೀಡಿದ್ದಾರೆ.

*KMC ಇಬ್ಬರು ವೈದ್ಯರು, 7 ವೈದ್ಯಕೀಯ ವಿದ್ಯಾರ್ಥಿಗಳು ಸಸ್ಪೆಂಡ್*

https://pragati.taskdun.com/kmc-hospitaltwodoctores7-medical-studentssuspended/

 

Related Articles

Back to top button