Latest

ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಶವ ರೈಲ್ವೆ ಹಳಿ ಮೇಲೆ ಪತ್ತೆ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿ ಶವ ತೆಲಂಗಾಣದ ಘನಪುರ ಬಳಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.

ಸೆ.9ರಂದು ಪಲ್ಲಕೊಂಡ ರಾಜು (30) ಎಂಬಾತ 6 ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ. ಘಟನೆ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದ ರಾಜು ನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆರೋಪಿ ಪತ್ತೆಗಾಗಿ ಹೈದರಾಬಾದ್, ಸೈಬರಾಬಾದ್ ಹಾಗೂ ರಾಚಕೊಂಡ ವಿಭಾಗದಲ್ಲಿ ಮೂರು ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು.

Home add -Advt

ಆರೋಪಿ ಚಿತ್ರ ಬಿಡುಗಡೆ ಮಾಡಿದ್ದ ಪೊಲೀಸರು, ಆರೋಪಿ ಸುಳಿವು ನೀಡಿದರೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಆದರೀಗ ಆರೋಪಿ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ.

ಈ ಬಗ್ಗೆ ಹೈದರಾಬಾದ್ ಪೂರ್ವ ವಲಯದ ಡಿಸಿಪಿ ರಮೇಶ್ ಖಚಿತಪಡಿಸಿದ್ದು, ಆರೋಪಿ ಸಾವನ್ನಪ್ಪಿದ್ದಾನೆ. ಪೊಲೀಸರು ಆರೋಪಿ ಹಿಂಬಾಲಿಸುತ್ತಿದ್ದಾಗ ಎಚ್ಚರಿಕೆಗೆ ಕಿವಿಗೊಡದೇ ಆತ ರೈಲಿನ ಮುಂದೆ ಹಾರಿದ್ದಾನೆ ಎಂದು ಹೇಳಲಾಗಿದೆ. ಹೆಚ್ಚಿನ ವಿವರ ಕಲೆಹಾಕಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಇತಿಹಾಸದಲ್ಲೇ ದೊಡ್ಡ ಕಾರ್ಯಾಚರಣೆ

Related Articles

Back to top button