ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಪತ್ನಿ ತನಗೆ ವಿಚ್ಛೇಧನ ನೀಡಲು ನಿರಾಕರಿಸಿದಳು ಎಂಬ ಕಾರಣಕ್ಕೆ ಪತಿ ಮಹಾಶಯನೊಬ್ಬ ಪತ್ನಿಗೆ ಹೇಗೆಲ್ಲ ಟಾರ್ಚರ್ ನೀಡಿದ್ದಾನೆ ನೋಡಿ. ಪತ್ನಿಯ ಓಡಾಟದ ಮೇಲೆ ಕಣ್ಣಿಡಲು ಆಕೆಯ ಸ್ಕೂಟಿಗೆ ಟ್ರ್ಯಾಕರ್ ಅಳವಡಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ವಿವೇಕ್ ವೀರೇಂದ್ರ ಸಿಂಗ್ (45) ಪತ್ನಿಯ ಸ್ಕೂಟಿಗೆ ಟ್ರ್ಯಾಕರ್ ಅಳವಡಿಸಿರುವ ವ್ಯಕ್ತಿ. ಈ ಕುರಿತು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ವಿವೇಕ್ ಗೆ ಬೇರೊಂದು ಮಹಿಳೆ ಜೊತೆ ಸಂಬಂಧವಿದ್ದು, ಪತ್ನಿಗೆ ವಿಚ್ಛೇದನ ನೀಡಿ ಆಕೆಯನ್ನು ವಿವಾಹವಾಗಲು ಬಯಸಿದ್ದ. ಆದರೆ ವಿಚ್ಛೇದನ ನೀಡಲು ಮಡದಿ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಪತಿ ಪ್ರತಿದಿನ ವಿಧವಿಧದಲ್ಲಿ ಟಾರ್ಚರ್ ನೀಡಲು ಆರಂಭಿಸಿದ್ದ. ಅದೇ ರೀತಿ ಪತ್ನಿ ಸ್ಕೂಟಿಗೆ ಟ್ರ್ಯಾಕರ್ ಅಳವಡಿಸಿ ಆಕೆಯನ್ನು ಹಿಂಬಾಲಿಸುವಂತೆ ಕೆಲವರನ್ನು ಬಿಟ್ಟಿದ್ದ ಎನ್ನಲಾಗಿದೆ. ಈ ಕುರಿತು ಪತ್ನಿ ಇದೀಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ