CrimeKannada NewsLatestNational

*ವಿಚ್ಛೇದಿತ ಪತ್ನಿ ಗರ್ಭಿಣಿಯೆಂಬುದನ್ನೂ ನೋಡದೇ ಬರ್ಬರವಾಗಿ ಹತ್ಯೆಗೈದ ಮಾಜಿ ಪತಿ*

ಪ್ರಗತಿವಾಹಿನಿ ಸುದ್ದಿ: ಸಾಫ್ಟ್ ವೇರ್ ಇಂಜಿನಿಯರ್ ಓರ್ವ ತನ್ನ ವಿಚ್ಛೇದಿತ ಮಾಜಿ ಪತ್ನಿಯನ್ನು ಗರ್ಭಿಣಿಎಂಬುದನ್ನೂ ನೋಡದೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಮಹೇಶ್ ಮಾಜಿ ಪತ್ನಿ ಕೊಂದ ಆರೋಪಿ. ಸುನೀತಾ ಕೊಲೆಯಾದ ಮಹಿಳೆ.

ಸುನಿತಾ ಹಾಗೂ ಮಹೇಶ್ ಸತಿ- ಪತಿಗಳಾಗಿದ್ದ ಸಂದರ್ಭದಲ್ಲಿ ಪತಿ ವಿರುದ್ಧ ಸುನೀತಾ ಕೌಟುಂಬಿಕ ಹಿಂಸಾಚಾರದ ದೂರು ದಾಖಲಿಸಿದ್ದಳಂತೆ. ಮಹೇಶ್ ಹಾಗೂ ಸುನೀತಾ 2022 ರಲ್ಲಿ ವಿವಾಹವಾಗಿದ್ದರು. ಬಳಿಕ ಆತ ಕೆನಡಾಕ್ಕೆ ತೆರಳಿದ್ದ, ಅಲ್ಲಿಗೆ ಪತ್ನಿಯನ್ನು ಕೂಡ ಕರೆದುಕೊಂಡು ಹೋಗಿದ್ದ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಗಿದ್ದರಿಂದ ಸುನೀತಾ ಭಾರತಕ್ಕೆ ವಾಪಸಾಗಿದ್ದಳು. ಬಳಿಕ ಪತಿ ವಿರುದ್ಧ ಮಹಾರಾಷ್ಟ್ರದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದಳು. ದಂಪತಿ 2024ರಲ್ಲಿ ವಿಚ್ಛೇದನ ಪಡೆದು ಬೇರೆಯಾಗಿದ್ದರು. ಸುನೀತಾ ಏಪ್ರಿಲ್ 2025 ರಲ್ಲಿ ಮತ್ತೊಂದು ಮದುವೆಯಾಗಿದ್ದಳು. ಹೈದರಾಬಾದ್ ನಲ್ಲಿ ಅಪಾರ್ಟ್ ಮೆಂಟ್ ನಲ್ಲಿ ಎರಡನೇ ಪತಿಯೊಂದಿಗೆ ವಾಸವಾಗಿದ್ದಳು. ಸುನೀತಾ ಮೂರು ತಿಂಗಳ ಗರ್ಭಿಣಿಯಾಗಿದ್ದಳು.

ಮಹೇಶ್ ತನ್ನ ತಾಯಿಯ ಮರಣದ ಬಳಿಕ್ ಮಾರ್ಚ್ 2025 ರಲ್ಲಿ ಭಾರತಕ್ಕೆ ಮರಳಿದ್ದ. ಆತನ ವಿರುದ್ಧ ಕೌಟುಂಬಿಕ ಹಿಂಸಾಚಾರ ಪ್ರಕರಣದ ದಾಖಲಾಗಿದ್ದರಿಂದ ಪೊಲೀಸರು ಲುಕ್-ಔಟ್ ನೋಟಿಸ್ ಜಾರಿ ಮಾಡಿದ್ದರು. ಆತನ ಪಾಸ್‌ಪೋರ್ಟ್ ಅಮಾನತುಗೊಳಿಸಲಾಗಿತ್ತು. ಇದರಿಂದ ಆತ ಮತ್ತೆ ಕೆನಡಾಗೆ ಹಿಂತಿರುಗಲು ಸಾಧ್ಯವಾಗಲಿಲ್ಲ. ಹೈದರಾಬಾದ್ ನ ಮನೆಯಲ್ಲಿ ವಾಸವಾಗಿದ್ದ ಆದರೆ ಮಾಡಲು ಕೆಲಸವಿಲ್ಲದೇ ನಿರುದ್ಯೋಗಿಯಾಗಿದ್ದ. ತನ್ನ ಈ ಎಲ್ಲಾ ಸ್ಥಿತಿಗೆ ಮಾಜಿ ಪತ್ನಿ ಸುನೀತಾಳೇ ಕಾರಣ ಆಕೆಯನ್ನು ಕೊಲ್ಲಲೇಬೇಕೆಂದು ನಿರ್ಧರಿಸಿ ಸೋಷಿಯಲ್ ಮೀಡಿಯಾಗಳ ಖಾತೆಗಳ ಮೂಲಕ ಆಕೆಯ ವಿಳಾಸವನ್ನು ಪತ್ತೆಹಚ್ಚಿದ್ದ.

Home add -Advt

ಬಳಿಕ ಹೈದರಾಬಾದ್ ನ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ. ಎರಡು ತಿಂಗಳ ಕಾಲ ಮಾಜಿ ಪತ್ನಿ ಹತ್ಯೆಗೆ ಸ್ಕೆಚ್ ಹಾಕಿದ್ದ. ಬಳಿಕ ಆಕೆವಾಸವಾಗಿದ್ದ ಅಪಾರ್ಟ್​ಮೆಂಟ್ ಗೆ ಬಂದಿದ್ದಾನೆ ಹೀಗೆ ಬರುವಾಗ ಆತ ಎರಡು ಚಾಕುಗಳು, ಒಂದು ಡ್ರಿಲ್ಲಿಂಗ್ ಮೆಷಿನ್ ಮತ್ತು ಐದು ಲೀಟರ್ ಪೆಟ್ರೋಲ್ ತುಂಬಿದ ಕ್ಯಾನ್‌ನೊಂದಿಗೆ ಮನೆಗೆ ನುಗ್ಗಿದ್ದಾನೆ. ಮಾಜಿ ಪತ್ನಿಯ ಕೋಣೆಗೆ ಪ್ರವೇಶಿಸಿ, ಒಳಗಿನಿಂದ ಲಾಕ್ ಮಾಡಿ, ಆಕೆಯ ತಲೆಗೆ ಚಾಕುವಿನಿಂದ ಹಲವು ಬಾರಿ ಇರಿದು ಕೊಂದಿದ್ದಾನೆ.

ಬಳಿಕ ರೂಮಿನ ತುಂಬ ಪೆಟ್ರೋಲ್ ಸುರಿದು ತಾನು ಶೌಚಾಲಯದೊಳಗೆ ಸೇರಿಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾನೆ. ಪೊಲೀಸರು ಆರೋಪಿಯನ್ನು ಹರಸಾಹಸಪಟ್ಟು ಬಂಧಿಸಿದ್ದಾರೆ.

Related Articles

Back to top button