Latest

4 ವರ್ಷದ ಬಾಲಕಿ ಮೇಲೆ ಪ್ರಾಂಶುಪಾಲರ ಚಾಲಕನಿಂದ ಅತ್ಯಾಚಾರ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ನಾಲ್ಕು ವರ್ಷದ ಪುಟ್ಟ ಕಂದಮ್ಮನ ಮೇಲೆ ಶಾಲೆಯ ಪ್ರಾಂಶುಪಾಲರ ಚಾಲಕ ಅತ್ಯಾಚಾರವೆಸಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಹೈದರಾಬಾದ್ ನ ಬಂಜಾರಾ ಹಿಲ್ಸ್ ಪ್ರದೇಶದಲ್ಲಿ 4 ವರ್ಷದ ಬಾಲಕಿ ಮೇಲೆ ಶಾಲೆಯ ಪ್ರಿನ್ಸಿಪಾಲ್ ಕಾರು ಚಾಲಕ ಅತ್ಯಾಚಾರ ಮಾಡಿದ್ದಾನೆ. ಖಾಸಗಿ ಶಾಲೆಯ ಕೊಠಡಿಯಲ್ಲಿ ಮಗುವನ್ನು ಕರೆದೊಯ್ದು ಕೃತ್ಯವೆಸಗಲಾಗಿದೆ.

Home add -Advt

ಶಾಲೆ ಬಳಿ ಪೋಷಕರು, ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಕಾರಿನ ಚಾಲಕ ರಜನಿಕುಮಾರ್ ಎಂಬಾತ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಕಳೆದ ಎರಡು ತಿಂಗಳಿಂದ ಮಗುವಿನ ಮೇಲೆ ಕಾಮುಕ ಚಾಲಕ ಅಟ್ಟಹಾಸ ಮೆರೆಯುತ್ತಿದ್ದ ಎನ್ನಲಾಗಿದೆ.

ಬಹಳ ಚಟುವಟಿಕೆಯಿಂದಿರುತ್ತಿದ್ದ ಕಂದಮ್ಮ ಇತ್ತೀಚೆಗೆ ಮೌನವಾಗಿರುತ್ತಿದ್ದಳು. ಆಗಾಗ ಸುಮ್ಮನೇ ಅಳುತ್ತಿದ್ದಳು. ಬರಬರುತ್ತಾ ಮಗಳು ಖಿನ್ನತೆಗೆ ಒಳಗಾಗುತ್ತಿರುವುದನ್ನು ಕಂಡು ಪೋಷಕರು ಆತಂಕಕ್ಕೀಡಾಗಿದ್ದಾರೆ. ಮಗುವನ್ನು ಸಮಾಧಾನದಿಂದ ವಿಚಾರಿಸಿದಾಗ ತನ್ನ ಮೇಲೆ ಕಾರು ಚಾಲಕ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಮಗು ಬಾಯ್ಬಿಟ್ಟಿದ್ದಾಳೆ.

ಕಾರು ಚಾಲಕನ ವಿರುದ್ಧ ಎಫ್ ಐ ಆರ್ ದಾಖಲಿಸಿರುವ ಪೊಲೀಸರು, ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪ್ರಿನ್ಸಿಪಾಲ್ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ.

ಯಾರಾಗಲಿದ್ದಾರೆ ಎಐಸಿಸಿ ಅಧ್ಯಕ್ಷರು?

https://pragati.taskdun.com/politics/aicc-electionvot-countingmallikarjuna-khargeshashitarur/

Related Articles

Back to top button