ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ : ಶನಿವಾರ ಮುಂಬಯಿ -ಬೆಳಗಾವಿ ಕಡೆಯಿಂದ ದಾಂಡೇಲಿಗೆ ಹೈಡ್ರೋಜನ್ ಪೆರಾಕ್ಸೈಡ್ ಗ್ಯಾಸ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ N L 01 RD 4579 ಕಕ್ಕೇರಿ ಗ್ರಾಮದಲ್ಲಿನ ಚಿಕ್ಕ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಪಲ್ಟಿಯಾದ ವಾಹನದಿಂದ ಗ್ಯಾಸ್ ಸೋರಿಕೆಯಾಗಿ ಪಕ್ಕದ ಗದ್ದೆಗಳಿಗೆ ಹರಿದು ನೆಲ ಕುದಿಯುತ್ತಿದ್ದು ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೋಲೀಸ್ ಸಿಬ್ಬಂದಿ ಅನಾಹುತ ತಪ್ಪಿಸಲು ಮತ್ತು ರಸ್ತೆ ತೆರವುಗೊಳಿಸುವ ಕಾರ್ಯದಲ್ಲಿ ಹರಸಾಹಸ ಪಟ್ಟಿದ್ದಾರೆ.
ಈ ಹೈಡ್ರೋಜನ್ ಪೆರಾಕ್ಸೈಡ್ ಗ್ಯಾಸ್ ಅಷ್ಟೊಂದು ಅಪಾಯಕಾರಿಯಲ್ಲ ಅಂತ ಅಗ್ನಿಶಾಮಕ ಅಧಿಕಾರಿ ಮನೋಹರ್ ರಾಥೋಡ ತಿಳಿಸಿದ್ದಾರೆ. ನಂದಗಡ ಪೋಲಿಸ್ ಠಾಣೆಯ ಪಿಎಸ್ಐ ಯು.ಟಿ.ಅವಟಿ ಸಿಬ್ಬಂದಿ ಘಟನಾಸ್ಥಳಕ್ಕೆ ಧಾಮಿಸಿ ಪರಿಶೀಲನೆ ನಡೆಸಿದರು. ಪ್ರಕಾಶ ಸೋಲಬನ್ನವರ, ಚಂದರಗಿ ಸೇರಿದಂತೆ ಇನ್ನಿತರರು ಸಂಚಾರ ಸುವ್ಯವಸ್ಥೆ ಮಾಡುವುದರಲ್ಲಿ ತಲ್ಲೀನರಾಗಿದ್ದರು.
ಬೆಳಗಾವಿಗೆ ಕಾಂಗ್ರೆಸ್ ನಿಂದ ಮೂವರ ಹೆಸರು ಹೈಕಮಾಂಡ್ ಗೆ – (updated)
ಸತೀಶ್ ಜಾರಕಿಹೊಳಿ ಜೊತೆ ಹೆಲಿಕಾಪ್ಟರ್ ನಲ್ಲಿ ಸುತ್ತಲು ಆಯ್ಕೆಯಾದವರ ಪಟ್ಟಿ
ಯುವರಾಜನ ಮೊಬೈಲ್ ನಲ್ಲಿ ಸವದಿ, ನಿರಾಣಿ, ಸೋಮಣ್ಣ, ವೇಣುಗೋಪಾಲ್ ಫೋಟೋ
ಮಹಾರಾಷ್ಟ್ರ ಆಸ್ಪತ್ರೆಯಲ್ಲಿ 10 ಶಿಶುಗಳ ಸಜೀವ ದಹನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ